ಚಾಮುಂಡಿ ಬೆಟ್ಟ ರಥದ ಚಕ್ರದಲ್ಲಿನ ಕಲಾಕೃತಿಗೆ ವಿರೋಧ : ಚರ್ಚೆಗೆ ಗ್ರಾಸವಾಯ್ತು ಸಂಸದ ಪ್ರತಾಪ್ ಸಿಂಹ ಅವರ ಪ್ರಚೋದನಾಕಾರಿ ಪೋಸ್ಟ್…

ಮೈಸೂರು,ಮಾ,10,2020(www.justkannada.in): ಮೈಸೂರಿನ ಚಾಮುಂಡಿ ಬೆಟ್ಟದ ರಥದ ಚಕ್ರದಲ್ಲಿ ಬಿಡಿಸಿದ್ದ ಕಲಾಕೃತಿಗೆ ವಿರೋಧ ವ್ಯಕ್ತಪಡಿಸಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಚಾಮುಂಡಿ ಬೆಟ್ಟದ ರಥದ ಚಕ್ರದಲ್ಲಿ ಪೇಂಟ್ ಮಾಡಿದ್ದ ಪೇಂಟರ್  ಆಕ್ಷೇಪಾರ್ಹ ಚಿತ್ರ ಬಿಡಿಸಿದ್ದರು. ಈ ಕಲಾಕೃತಿಗೆ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಈ ವಿಚಾರ ಮುಜರಾಯಿ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಪೇಟಿಂಗ್ ಬದಲಾವಣೆ ಮಾಡಲಾಗಿದೆ. ಅಧಿಕಾರಿಗಳು ತಕ್ಷಣ ಪೇಟಿಂಗ್ ಬದಲಿಸಿದ್ದರೂ ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡದೇ ಹಳೆ ಪೋಟೊವನ್ನ ಮಾತ್ರ ಪೋಸ್ಟ್ ಮಾಡಿ ಸಾರ್ವಜನಿಕ ಚರ್ಚೆಗೆ ಕಾರಣರಾಗಿದ್ದಾರೆ. ಚಾಮುಂಡಿ ಬೆಟ್ಟದ ರಥಕ್ಕೆ ಮಾಡಿದ್ದ ಪೇಟಿಂಗ್ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಸಂಸದ ಪ್ರತಾಪ್ ಸಿಂಹ, ನಿಮ್ಮ ಗಮನಕ್ಕೆ ಇರಲಿ ಅಂತ ಹಾಕಿದ್ದೇನೆ ಪಾಠ ಕಲಿಸದೆ ಬಿಡಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.mysore-chamundi-hills-opposition-artifact-chariot-mp-pratap-simha-post

ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.  ಸಮಾಜದ ಸ್ವಾಸ್ತ್ಯ ಕಾಪಾಡಬೇಕಾದ ಸಂಸದರೆ ಹೀಗೆ ಪ್ರಚೋದಕಾರಿ ಪೋಸ್ಟ್ ಮಾಡಿದ್ದು ಸರಿಯೆ..? ಶಾಂತಿ ಕಾಪಾಡಬೇಕಾದ ಸಂಸದರ ನಡೆ ಸರಿಯಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words:  mysore- chamundi hills- Opposition -artifact -chariot –MP Pratap Simha -post