ಕೊರೋನಾ ನಡುವೆಯೂ ಮೈಸೂರು ಚಾಮುಂಡಿಬೆಟ್ಟದ ಹುಂಡಿಯಲ್ಲಿ ಭರ್ಜರಿ ಕಾಣಿಕೆ ಸಂಗ್ರಹ…

ಮೈಸೂರು,ನವೆಂಬರ್,11,2020(www.justkannada.in):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಕೊರೊನಾ ಸಂಕಷ್ಟದ ನಡುವೆಯೂ ಮೈಸೂರಿನ ಚಾಮುಂಡಿ ಬೆಟ್ಟದ ಹುಂಡಿಯಲ್ಲಿ ಭರ್ಜರಿ ಕಾಣಿಕೆ  ಸಂಗ್ರಹವಾಗಿದೆ.kannada-journalist-media-fourth-estate-under-loss

ಅಕ್ಟೋಬರ್ ತಿಂಗಳ ಹುಂಡಿ ಹಣ ಎಣಿಕೆ ನಡೆದಿದ್ದು, ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ 65 ಲಕ್ಷದ 61 ಸಾವಿರದ 229 ರೂಪಾಯಿ  ಕಾಣಿಕೆ ಸಂಗ್ರಹವಾಗಿದೆ. ಈ ಕುರಿತು ಮುಜರಾಯಿ ತಹಶಿಲ್ದಾರ್ ಚಾಮುಂಡೇಶ್ವರಿ ದೇವಸ್ಥಾನದ ಇಓ ಯತಿರಾಜ್ ಮಾಹಿತಿ ನೀಡಿದ್ದಾರೆ.mysore-chamundi-hill-hundi-money-collection

2000 ಸಾವಿರ ಮುಖ ಬೆಲೆಯ 98 ನೋಟು, 500 ಮುಖಬೆಲೆಯ 4932 ನೋಟು, 29 ಸಾವಿರ ರೂ. ನಷ್ಟು 1 ರೂಪಾಯಿ ನಾಣ್ಯ, 17 ಸಾವಿರ ರೂ. ನಷ್ಟು 2 ರೂಪಾಯಿ ನಾಣ್ಯ ಸಂಗ್ರಹವಾಗಿದೆ. ತಾಯಿ ಚಾಮುಂಡೇಶ್ವರಿ ದೇಗುಲದ ಹುಂಡಿಯಲ್ಲಿ ಈ ಬಾರಿಯೂ ಬ್ಯಾನ್ ಆದ ನೋಟುಗಳು ಪತ್ತೆಯಾಗಿವೆ. ಬ್ಯಾನ್ ಆದ 500 ಹಾಗೂ 1000 ಮುಖಬೆಲೆಯ ಅಮಾನ್ಯಗೊಂಡಿರುವ  ನೋಟುಗಳು ಪತ್ತೆಯಾಗಿದೆ.

English summary…

Huge collection in Chamundi temple hundi
Mysuru, Nov. 11, 2020 (wwwjustkannada.in): According to information provided by Sri Yathiraj, EO, Chamundeshwari Temple and Muzrai Tahasildar a sum of Rs. 65,61,229/- has been collected in the hundi in the Chamundeshwari temple atop Chamundi Hills in the month of October 2020. Devotees have donated generously even amidst corona and lockdown.
Keywords: Chamundi hill-Hundi collection

Key words: Mysore- Chamundi hill – Hundi –money- Collection