ಆರೋಪಿ‌ಗಳ ಗುರುತು ಪತ್ತೆ ಕಾರ್ಯದಲ್ಲಿ ಭಾಗಿಯಾದ ಶಾಸಕ ತನ್ವೀರ್‌ ಸೇಠ್….

Promotion

ಮೈಸೂರು,ಜ,9,2020(www.justkannada.in):  ಶಾಸಕ ತನ್ವೀರ್ ಸೇಠ್ ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಆಗಮಿಸಿ ಆರೋಪಿಗಳ ಗುರುತು ಪತ್ತೆ ಪರೇಡ್ ನಲ್ಲಿ ಭಾಗಿಯಾಗದರು.

ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಕೇಂದ್ರ ಕಾರಗೃಹದಲ್ಲಿ ಆರೋಪಿಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು, ಆರೋಪಿ ಫರಹಾನ್ ಪಾಷಾ ಹಾಗೂ ಆರೋಪಿಗಳ ಗುರುತು ಹಿಡಿಯೊ ಕಾರ್ಯದಲ್ಲಿ ಶಾಸಕ ತನ್ವೀರ್ ಸೇಠ್ ಭಾಗಿಯಾದರು.

ಶಾಸಕರ ಜೊತೆಗೆ 6 ಮಂದಿ ಪ್ರತ್ಯಕ್ಷದರ್ಶಿಗಳು ಹಾಗೂ ಪೊಲೀಸರಿಂದ  ಪರೇಡ್ ನಡೆಯುತ್ತಿದ್ದು ಆರೋಪಿಗಳ ಪತ್ತೆ ಕಾರ್ಯ ಮಾಡಲಾಗುತ್ತಿದೆ.  ನವೆಂಬರ್ 17ರಂದು ಕಾರ್ಯಕ್ರಮವೊಂದರಲ್ಲಿ  ಶಾಸಕ ತನ್ವೀರ್ ಸೇಠ್  ಮೇಲೆ ಮಾರಣಾಂತಿಕ ನಡೆದಿತ್ತು. ಆರೋಪಿ ಫರಹಾನ್ ಪಾಷಾ ಮಚ್ಚಿನಿಂದ ಶಾಸಕ ತನ್ವೀರ್‌ಸೇಠ್  ಮೇಲೆ ಹಲ್ಲೆ ಮಾಡಿ ಸಿಕ್ಕಿಬಿದ್ದಿದ್ದ. ಈ ವೇಳೆ ಶಾಸಕ ತನ್ವೀರ್‌ಸೇಠ್ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು.

ಗಾಯಾಳು ಶಾಸಕ ತನ್ವೀರ್ ಸೇಠ್ ರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಶಾಸಕ ತನ್ವೀರ್‌ಸೇಠ್ ವಿದೇಶಕ್ಕೆ ಹೋಗಿದ್ದರು. ಚಿಕಿತ್ಸೆ ನಂತರ ದುಬೈನಲ್ಲೆ ಶಾಸಕ ತನ್ವೀರ್ ಸೇಠ್ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ವಿಶ್ರಾಂತಿ ಮುಗಿಸಿ ತನ್ವೀರ್ ಸೇಠ್ ವಿದೇಶದಿಂದ ಭಾರತಕ್ಕೆ ವಾಪಸಾಗಿದ್ದಾರೆ.

ನೇರ ಬೆಂಗಳೂರಿನಿಂದ ಮೈಸೂರು ಕಾರಾಗೃಹಕ್ಕೆ ಆಗಮಿಸಿದ ಶಾಸಕ ತನ್ವೀರ್ ಸೇಠ್ ಆರೋಪಿ ಗುರುತು ಪತ್ತೆಗೆ ಮುಂದಾದರು.

Key words: mysore- central jail-MLA- Tanveer Sait-identity- detection – accused.