ಮೈಸೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ‘ಕರಾಳ ದಿನಾಚರಣೆ’ .

Mysore-central-jail-bjp

 

ಮೈಸೂರು, ಜೂ.26, 2022 : (www.justkannada.in news )ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ ತುರ್ತು ಪರಿಸ್ಥಿತಿಯ ಕರಾಳ ದಿನ ಎಂಬ ಶೀರ್ಷಿಕೆಯಡಿಯಲ್ಲಿ ತುರ್ತು ಪರಿಸ್ಥಿಯ 47ನೇ ವರ್ಷದ ಕರಾಳ ದಿನಾಚರಣೆ ಕಾರ್ಯಕ್ರಮ ಮೈಸೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನಾಡಿದ ಶಾಸಕರೂ ಹಾಗೂ ಮಾಜಿ ಸಚಿವರಾದ ಎಸ್.ಎ..ರಾಮದಾಸ್ ಹೇಳಿದಿಷ್ಟು…

ಪ್ರಧಾನಿ ನರೇಂದ್ರ ಮೋದಿಯವರ ಆಸೆಯಂತೆ ಈ ವರ್ಷವನ್ನು ನಾವು ಸ್ವತಂತ್ರ ವರ್ಷವನ್ನಾಗಿ ಆಚರಣೆ ಮಾಡುತ್ತಿದ್ದೇವೆ. ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಒಳ್ಳೆಯದನ್ನ ಸಿಹಿಯನ್ನು ಸವಿಯುವ ಸಂದರ್ಭದಲ್ಲಿ ಅದರ ಹಿಂದೆ ಇರುವಂತ ಒಂದು ಪರಿಶ್ರಮದ ನೆನಪು ಮಾಡಿಕೊಳ್ಳುವುದು ಕಡಿಮೆ.

ಅಮೃತಮಹೋತ್ಸವ ವರ್ಷದಲ್ಲಿ ಭಾರತದ ಸ್ವಾತಂತ್ರ್ಯಕ್ಕೋಸ್ಕರ ವಾಗಿ ಹೋರಾಟ ಮಾಡಿ ತಮ್ಮ ಜೀವನ ತಮ್ಮ ಆಸ್ತಿಯನ್ನು ತಮ್ಮ ಸರ್ವಸ್ವವನ್ನು ದೇಶಕ್ಕೆ ಕೊಟ್ಟವರು ಒಂದು ಭಾಗ ಆದರೆ ಭಾರತದಲ್ಲಿ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಕರಾಳ ದಿನ ಜೂನ್ 25 1975 ರಲ್ಲಿ ಭಾರತಕ್ಕೆ ತುರ್ತುಪರಿಸ್ಥಿತಿಯನ್ನು ಹೇರಿದಾಗ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಮನುಷ್ಯನಿಗಿರುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಹಕ್ಕು ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಅಂತ ವಿಚಾರವನ್ನು ಕೊಟ್ಟು ಹೋರಾಟವನ್ನು ಮಾಡಿ ಭಾರತದಾದ್ಯಂತ ಲಕ್ಷಾಂತರ ಜನ
ಜೈಲನ್ನು ಸೇರಿದ್ದರು.

ಇದೇ ಸಂದರ್ಭದಲ್ಲಿ ನಮ್ಮ ಮೈಸೂರಿನಲ್ಲಿ 269 ಮೈಸೂರಿಗರು ಜೈಲಿನಲ್ಲಿ ಸೆರೆಯಾಗಿದ್ದರು ಅವರ ಅಂದಿನ ಹೋರಾಟದ ಪರವಾಗಿ ಮತ್ತು ಅವರ ನೆನಪಿನಲ್ಲಿ ಇವತ್ತು ಜೂನ್ 25 ರಂದು ಕೇಂದ್ರ ಕಾರಾಗ್ರಹದ ಮುಂದೆ ಕರಾಳದಿನದ ನೆನಪಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಮಾಡಿದವರ ಪೈಕಿ ಶ್ರೀಧರ್, ವಾಮನ್, ಪದ್ಮ ನರಸಿಂಹಮೂರ್ತಿ, ಹಿರಿಯೂರು ವೆಂಕಟೇಶ್, ಮಹದೇವಣ್ಣ, ತೋಟದಾರ್ಯ, ಎನ್.ಆರ್.ಚಂದ್ರಶೇಖರ್, ನಜರ್ ಬಾದ್ ಮಹದೇವಣ್ಣ, ರಾಮಕೃಷ್ಣ ರವರು ಸನ್ಮಾನಿಸಲಾಯಿತು.

ಮುಖ್ಯ ಅಥಿತಿಯಾಗಿ ಮೇಯರ್ ಸುನಂದಾ ಪಾಲನೇತ್ರ, ವಡಿವೇಲು, ಭಾನುಪ್ರಕಾಶ್, ನಾಗೇಂದ್ರ ಕುಮಾರ್, ಜೆ.ರವಿ, ಪ್ರಸಾದ್ ಬಾಬು, ಶಿವಪ್ಪ, ಸಂತೋಷ್ ಶಂಭು, ಸಂತೋಷ್ ಗ್ರಿಲ್, ಹೇಮಂತ್, ಪಿ.ಟಿ.ಕೃಷ್ಣ, ಅನ್ನಪೂರ್ಣ, ನಾಗರತ್ನ ಮುಂತಾದವರು ಉಪಸ್ಥಿತರಿದ್ದರು.

key words : Mysore-central-jail-bjp