ಬ್ರಿಟನ್: ಮೈಸೂರಿಗೆ ‘ಏಳ’ರ ನಂಟು…..

ಮೈಸೂರು,ಡಿಸೆಂಬರ್, 22,2020(www.justkannada.in): ವಿಮಾನದ ಮೂಲಕ ಬ್ರಿಟನ್ ನಿಂದ ಬೆಂಗಳೂರಿಗೆ ಬಂದ 85 ಪ್ರಯಾಣಿಕರ ಪೈಕಿ 7 ಮಂದಿ ಮೈಸೂರಿನವರು ಎಂಬುದು ತಿಳಿದು ಬಂದಿದೆ.Teachers,solve,problems,Government,bound,Minister,R.Ashok

ಕಳೆದ ಎರಡು ದಿನಗಳ ಹಿಂದೆ ಈ ಪ್ರಯಾಣಿಕರು ಇಂಗ್ಲೇಂಡ್ ನಿಂದ ಬೆಂಗಳೂರಿಗೆ ಬಂದಿದ್ದಾರೆ. ಆದರೆ ಎರಡು ದಿನಗಳಿಂದ ಬ್ರಿಟನ್ ನಲ್ಲಿ ಕರೋನಾ ವೈರಸ್ ಸೋಂಕು ಉಲ್ಬಣಗೊಂಡಿರುವ ಕಾರಣ ಬ್ರಿಟನ್ ನಿಂದ ಬಂದಿರುವ ಪ್ರಯಾಣಿಕರ ಕರೋನಾ ಪರೀಕ್ಷೆ ನಡೆಸುವಂತೆ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿರುವ ಪ್ರಯಾಣಿಕರ ಹಿನ್ನಲೆಯನ್ನು ಸಂಗ್ರಹಿಸಿ ಅವರನ್ನು ಸಂಪರ್ಕಿಸುವ ಪ್ರಯತ್ನ ಸಂಬಂಧ ಪಟ್ಟ ಇಲಾಖೆ ನಡೆಸುತ್ತಿದೆ.mysore- britan-corona-7 people-come-back

ಈ ನಡುವೆ ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರ ಪೈಕಿ ಏಳು ಮಂದಿ ಮೈಸೂರಿನವರಾಗಿದ್ದು ಇವರ ಮಾಹಿತಿ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

Key words: mysore- britan-corona-7 people-come-back