ಸಾ.ರಾ.ಮಹೇಶ್ ನನ್ನ ಸಮನಲ್ಲ, ಪತ್ರ ಬರೆಯೋದ್ರಿಂದ ಸಮಸ್ಯೆ ಇಲ್ಲ : ವಿಶ್ವನಾಥ್

 

ಮೈಸೂರು, ಜು.26, 2020 : (www.justkannada.in news) ಸಾ.ರಾ.ಮಹೇಶ್ ನನ್ನ ಸಮನಲ್ಲ. ಅವನ ಬಗ್ಗೆ ನಾನು ಮಾತನಾಡೋದೆ ಇಲ್ಲ ಎಂದು ವಿಧಾನ ಪರಿಷತ್ ಗೆ ನೂತನವಾಗಿ ನಾಮಕರಣಗೊಂಡಿರುವ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಮೈಸೂರಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದಿಷ್ಟು…

ನನ್ನ ಆಯ್ಕೆಯ ಬಗ್ಗೆ ಕಾನೂನಿನ ತೊಡಕಿದ್ದರೆ ಅದನ್ನ ರಾಜ್ಯಪಾಲರೇ ಉತ್ತರ ಕೊಡ್ತಾರೆ. ಇವರು ಪತ್ರ ಬರೋದ್ರಿಂದ ನನಗೇನು ಸಮಸ್ಯೆ ಇಲ್ಲ‌. ಅದನ್ನ ತೀರ್ಮಾನ ಮಾಡೋದು ರಾಜ್ಯಪಾಲರು. ಸಾ.ರಾ.ಮಹೇಶ್ ನನಗೆ ಸಮಾನು ಅಲ್ಲ, ನನ್ನ ಪ್ರತಿಸ್ಪರ್ಧಿಯೂ ಅಲ್ಲ. ನಾನಂತು ಅವನ ಬಗ್ಗೆ ಮಾತನಾಡೋಲ್ಲ. ಏಕವಚನದಲ್ಲೆ ಸಾ.ರಾ.ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ ಹಳ್ಳಿಹಕ್ಕಿ ವಿಶ್ವನಾಥ್.

jk-logo-justkannada-logo

ಸಿಎಂ ಯಡಿಯೂರಪ್ಪರನ್ನು ಹೊಗಳಿದದ್ದು ಹೀಗೆ..

ಬಿಜೆಪಿ ಸರ್ಕಾರ ಒಂದು ಪೂರೈಸಿದ ಹಿನ್ನೆಲೆ, ಹೆಚ್.ವಿಶ್ವನಾಥ್‌ ಅವರಿಂದ ಸರ್ಕಾರಕ್ಕೆ ಶುಭಾಶಯ. ಯಡಿಯೂರಪ್ಪ ಉತ್ತಮ ತಂಡ ಕಟ್ಟಿಕೊಂಡು ಕೆಲಸ ಮಾಡಿದ್ದಾರೆ‌. ಆದ್ರೆ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕೋವಿಡ್ ನುಂಗಿಹಾಕಿದೆ. ಆದ್ರೂ ಕಷ್ಟದ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಂತಹ ಸರ್ಕಾರ ಬರೋಕೆ ನಾವು ಕಾರಣರಾಗಿದ್ದೇವೆ ಅನ್ನೋದು ನನಗೆ ಹೆಮ್ಮೆ.

mysore-bjp-vishwanath-cm-yadiyurappa-.sa.ra.mahesh

ನಮ್ಮ ನಡೆಯಿಂದ ಸಂವಿಧಾನದ ಅಡಿಯಲ್ಲಿ ಇಂತದೊಂದು ಬದಲಾವಣೆ ಆಗಿದೆ ಅನ್ನೋದು ಸಮಾಧಾನ. ಒಂದು ವರ್ಷದ ಈ ಸಾಧನೆ ನನಗೆ ಸಾರ್ಥಕತೆ ಅನುಭವ ತಂದಿದೆ. ವಿರೋಧ ಪಕ್ಷಗಳಿಗೆ ಬರಿ ವಿರೋಧ ಮಾಡೋದು ಮಾತ್ರ ಗೊತ್ತು. ಅವರು ಅಧಿಕಾರದಲ್ಲಿದ್ದಾಗಾ ರಾತ್ರಿ ವೇಳೆಯೂ ಸೂರ್ಯ ಚಂದ್ರ ಕಾಣ್ತಾರೇ. ಆದ್ರೆ ಅವರು ಅಧಿಕಾರದಲ್ಲಿ ಇಲ್ಲ ಅಂದ್ರೆ ಅದ್ಯಾಕೋ ರಾತ್ರಿವೇಳೆ ಸೂರ್ಯ ಕಾಣ್ತಿಲ್ಲ ಅಂತಾರೆ. ಅವರಿಗೆ ಸರ್ಕಾರ ಸಾಧನೆ ಅಥವಾ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡೋದು ಗೊತ್ತೆ ಇಲ್ಲ. ಒಂದು ವರ್ಷದಲ್ಲಿ ಒಂದಾದರೂ ಒಳ್ಳೆಯ ಕೆಲಸ ಮಾಡಿಲ್ಲವೇ ಬಿಜೆಪಿ ಸರ್ಕಾರ. ಆ ಒಂದೆ ಒಂದು ಕೆಲಸವನ್ನ ಒಳ್ಳೆಯದು ಆಗಿದೆ ಅಂತ ಹೇಳಲಿ. ಅದು ಬಿಟ್ಟು ಎಲ್ಲವನ್ನು ಟೀಕೆ ಮಾಡೋದು ಸರಿಯಲ್ಲ‌. ವಿರೋಧ ಪಕ್ಷದ ನಾಯಕರ ನಿಲವುಗಳು ದ್ವಂದದಿಂದ ಕೂಡಿದೆ. ಮೈಸೂರಿನಲ್ಲಿ ಹೆಚ್.ವಿಶ್ವನಾಥ್ ಹೇಳಿಕೆ.

ooooo

key words : mysore-bjp-vishwanath-cm-yadiyurappa-.sa.ra.mahesh