ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ: ಬಿಜೆಪಿಯವರು ನಿಜವಾದ ಭಯೋತ್ಪಾದಕರು ಎಂದು ಕಿಡಿಕಾರಿದ ಡಾ. ಪುಷ್ಪ ಅಮರನಾಥ್…

Promotion

ಮೈಸೂರು,ಡಿ,25,2019(www.justkannada.in): ಸಿ.ಎ.ಎ. ಮತ್ತು ಎನ್.ಆರ್.ಸಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟ ದೇಶಾದ್ಯಂತ ಕಿಚ್ಚನ್ನು ಹೊತ್ತಿಸಿದೆ. ಪೌರತ್ವ ಕಾಯ್ದೆಯ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಠಿಮಾಡುತ್ತಿದ್ದಾರೆ. ಬಿಜೆಪಿಯವರು ನಿಜವಾದ ಭಯೋತ್ಪಾದಕರು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ವಾಗ್ದಾಳಿ ನಡೆಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಸ್ವಾತಂತ್ರ್ಯ ಪೂರ್ವದಲ್ಲಿ ಈ ರೀತಿಯ ಹೋರಾಟ ನಡೆದಿತ್ತು. ಎನ್.ಆರ್.ಸಿ ಕಾಯ್ದೆ ಜಾರಿ ಮೂಲಕ ಅಲ್ಪ ಸಂಖ್ಯಾತರು ಮಾತ್ರವಲ್ಲದೇ,ಹಿಂದುಳಿದವರು, ಆದಿವಾಸಿಗಳ ಪೌರತ್ವವನ್ನು ಕಳೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ಪೊಲೀಸ್ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ಸಂಸದರು, ಶಾಸಕರ ವಿರುದ್ಧ ಸರ್ಕಾರ ಮೌನವಾಗಿದೆ. ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಶಾಂತಿ ನೆಲೆಸುವುದು ಬೇಡವಾಗಿದೆ ಎಂದು ಕಿಡಿಕಾರಿದರು.

ಮೈಸೂರಿನ ಗಲಭೆಗೆ ಸಂಸದ ಪ್ರತಾಪ್ ಸಿಂಹ ಕಾರಣ…..

ಮೈಸೂರಿನ ಗಲಭೆಗೆ ಸಂಸದ ಪ್ರತಾಪ್ ಸಿಂಹ ಕಾರಣ. ಅವರು ಸಂಸದರಾದ ಮೇಲೆ ಮೈಸೂರಿನಲ್ಲಿ ಅಶಾಂತಿ ಉಂಟಾಗಿದೆ. ಕಾಂಗ್ರೆಸ್ ನವರನ್ನು ಸೊಳ್ಳೆ ಎನ್ನುವ ನೀವು ತಿಗಣೆಗಳು. ಬಡವರ ರಕ್ತ ಹೀರುವ ತಿಗಣೆಗಳು ಬಿಜೆಪಿಯವರು. ಮಡಿಕೇರಿಯ ಪ್ರವಾಹಕ್ಕೆ ಕೇಂದ್ರ ಪರಿಹಾರ ತರಲು ಯೋಗ್ಯತೆ ಇಲ್ಲದಿದ್ರೂ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ ಎಂದು ಪುಷ್ಪ ಅಮರನಾಥ್ ಹರಿಹಾಯ್ದರು.

ಮಂಗಳೂರಿನಲ್ಲಿ ನಡೆದಿರುವ ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರೇ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮಂಗಳೂರಿನಲ್ಲಿ ಪೋಲೀಸರೇ ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಆರೋಪಿಸಿದರು.

Key words: mysore- BJP- real terrorists – KPCC Women’s Unit – president – Pushpa Amarnath