ತಡೆಯೊಡ್ಡು, ವಿಳಂಬಿಸು, ದಾರಿ ತಪ್ಪಿಸು – ಇದು ಕಾಂಗ್ರೆಸ್ ಆಡಳಿತ ಮಂತ್ರ-ಮೈಸೂರಿನಲ್ಲಿ ಸಿ.ಟಿ ರವಿ ಟೀಕೆ…

ಮೈಸೂರು,ಅಕ್ಟೋಬರ್,15,2020(www.justkannada.in): ತಡೆಯೊಡ್ಡು, ವಿಳಂಬಿಸು, ದಾರಿ ತಪ್ಪಿಸು – ಇದು ಕಾಂಗ್ರೆಸ್ ಆಡಳಿತ ಮಂತ್ರ. ಅಭಿವೃದ್ಧಿಯ ಮಹಾಪರ್ವ  ಇದು ಬಿಜೆಪಿಯ ಆಡಳಿತ ಮಂತ್ರ. ಕೇಡರ್ ಗಳೇ ಲೀಡರ್ ಗಳಾಗಿರುವ ದೇಶದ ಏಕೈಕ ಪಕ್ಷ ಬಿಜೆಪಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟೀಕಿಸಿದರು.jk-logo-justkannada-logo

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಹೆಚ್.ವಿಶ್ವನಾಥ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಸಭೆಯಲ್ಲಿ ಹಳೇ ಮೈಸೂರು‌ ಭಾಗದಲ್ಲಿ ಪಕ್ಷ ಸಂಘಟನೆ ಹಾಗೂ ತಳ ಮಟ್ಟದಿಂದ ಪಕ್ಷ ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಿ. ಟಿ. ರವಿಯವರಿಗೆ ಸನ್ಮಾನ, ಅಭಿನಂದನೆ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೇಡರ್‌ಗಳೇ ಲೀಡರ್‌ಗಳಾಗುವ ದೇಶದ ಏಕೈಕ ಪಕ್ಷ ಬಿಜೆಪಿ. ನಮ್ಮದು ಕೇಡರ್ ಬೇಸ್ಡ್ ಪಕ್ಷ. ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಹುದ್ದೆ ಸಿಕ್ಕಿರೋದು ರೋಮಾಂಚನ ಉಂಟು ಮಾಡುತ್ತೆ. ಪ್ರಧಾನಿ ನರೇಂದ್ರ ಮೋದಿ ಪ್ರಪಂಚಕ್ಕೇ ಮಾದರಿ ಎನ್ನುವಂತಹ ಆಡಳಿತ ಕೊಡುತ್ತಿದ್ದಾರೆ. ಕಿಶಾನ್ ಸಮ್ಮಾನ್, ಕಾರ್ಮಿಕರ ಪರಿಹಾರ, ವಸತಿ ಯೋಜನೆ, ಪಿಂಚಣಿ, ಸಬ್ಸಿಡಿ ಎಲ್ಲವನ್ನೂ ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ ಎಂದು ಬಣ್ಣಿಸಿದರು.

 ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ…

ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಿ.ಟಿ ರವಿ,  ರಾಮಮಂದಿರ ಐದು ಶತಮಾನದ ಕನಸು. ಕೆಲವರು ನನ್ನ ಹೆಸರಿನಲ್ಲೇ ರಾಮ ಇದೆ ಅಂತ ಎನ್ನುತ್ತಿದ್ದಾರೆ. ಆದರೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡಿರಲಿಲ್ಲ. ಈಗ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಆದೆ. ಅದು ಭಾರತದ ಅಸ್ಮಿತೆಯ ಪ್ರತೀಕ  ಎಂದು ಕಿಡಿಕಾರಿದರು.

ತಡೆಯೊಡ್ಡು, ವಿಳಂಬಿಸು, ದಾರಿ ತಪ್ಪಿಸು – ಇದು ಕಾಂಗ್ರೆಸ್ ಆಡಳಿತ ಮಂತ್ರ. ಅಭಿವೃದ್ಧಿಯ ಮಹಾಪರ್ವ – ಬಿಜೆಪಿ ಆಡಳಿತ ಮಂತ್ರ. 1986ರ ಕಾಲದಲ್ಲಿ ಕೇಂದ್ರದಿಂದ ಬಂದ ಎಲ್ಲ ಹಣ ಕಳ್ಳರ ಪಾಲಾಗುತ್ತಿತ್ತು. ಈಗ ಫಲಾನುಭವಿಗಳ ಹಣ ನೇರವಾಗಿ ಫಲಾನುಭವಿ ಖಾತೆ ತಲುಪುತ್ತಿದೆ. ಇದು ಪರಿವರ್ತನೆಯ ಕಾಲ‌ ಅಲ್ವಾ.? ಎಂದು ಸಿ.ಟಿ ರವಿ ಶ್ಲಾಘಿಸಿದರು.mysore-bjp-national-general-secretary-ct-ravi-outrage-congress

ಜೆಡಿಎಸ್ ವಿರುದ್ಧ ವ್ಯಂಗ್ಯ…

ಇದೇ ವೇಳೆ ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ ಸಿ.ಟಿ ರವಿ, ದೊಡ್ಡಗೌಡ, ಸಣ್ಣಗೌಡ, ಮರಿಗೌಡ ಅಂತಾರೆ. ಅವರಿಗೆ ಕುಟುಂಬದ ಅಭಿವೃದ್ಧಿಯೇ ಮುಖ್ಯ ಎಂದು ಲೇವಡಿ ಮಾಡಿದರು.

Key words:  mysore-BJP- national general secretary- CT Ravi –outrage- Congress