ಸಿಎಂ ಎಚ್ಡಿಕೆ ಗ್ರಾಮ ವಾಸ್ತವ್ಯಕ್ಕೆ ಎಂಪಿ ಎಲೆಕ್ಷನ್ ಎಫೆಕ್ಟ್ ಕಾರಣ : ಬಿಜೆಪಿ ಶಾಸಕ ಎಲ್.ನಾಗೇಂದ್ರ ವ್ಯಂಗ್ಯ

 

ಮೈಸೂರು, ಜೂ.09, 2019 : (www.justkannada.in news) ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರಾರು ನೀಡಿದ ತೀರ್ಪಿನಿಂದ ಕಂಗ್ಗೆಟ್ಟು ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ವಿಚಾರವನ್ನು ಮತ್ತೆ ಮುನ್ನಲೆಗೆ ತಂದಿದ್ದಾರೆ ಎಂದು ಬಿಜೆಪಿ ಶಾಸಕ ನಾಗೇಂದ್ರ ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಮಾತನಾಡಿದ ಬಿಜೆಪಿ ಶಾಸಕ ನಾಗೇಂದ್ರ ಹೇಳಿದಿಷ್ಟು…..

ಮೊದಲು ಮೈಸೂರಿನ ಮಾರುಕಟ್ಟೆಯಲ್ಲಿ ವಾಸ್ತವ್ಯ ಮಾಡಿ. ನಾನೂ ನಿಮ್ಮ ಜತೆ ವಾಸ್ತವ್ಯ ಮಾಡ್ತೆನೆ. ಸಿಎಂ ಅವರಿಗೆ ಈಗ ಎಚ್ಚರವಾಗಿದೆ‌.‌ ಒಂದು ವರ್ಷದಿಂದ ಗ್ರಾಮ ವಾಸ್ತವ್ಯದ ನೆನಪೇ ಇರಲಿಲ್ಲ. ಆದರೆ ಲೋಕಸಭಾ ಚುನಾವಣೆಯ ಸೋಲಿನ ನಂತರ ಅವರಿಗೆ ಗ್ರಾಮ ವಾಸ್ತವ್ಯ ನೆನೆಪಾಗಿದೆ.
ಗ್ರಾಮ ವಾಸ್ತವ್ಯ ಮಾಡುವುದು ಒಳ್ಳೆಯ ವಿಚಾರ. ಆದ್ರೇ ಇದರ ಜೊತೆಯಲ್ಲಿ ಮೈಸೂರನ್ನು ನೆನಪಿಸಿ ಕೊಂಡಿದ್ದರೇ ಉತ್ತಮ ವಾಗಿತ್ತು.ನಿಮ್ಮ ಬಜೆಟ್ ನಲ್ಲಿ ೨ ಲಕ್ಷ ಸಾವಿರ ಕೋಟಿ ರೂಗಳ ಬಜೆಟ್ ಮಂಡನೆ ಮಾಡಿದ್ದಿರಿ. ಆದ್ರೇ ಮೈಸೂರಿನ ಅಭಿವೃದ್ಧಿಗೆ ನಿಮ್ಮ ಬಜೆಟ್ ೧೦೦ ಕೋಟಿಯನ್ನು ನೀಡಿಲ್ಲ. ಮೈಸೂರು ವಿಶ್ವದಲ್ಲೇ ಪಾರಂಪರಿಕತೆಯಲ್ಲಿ ಪ್ರಮುಖ ನಗರವಾಗಿದೆ. ಆದ್ರೇ ವಿಪರ್ಯಾಸವೆಂದರೆ ಮೈಸೂರಿನಲ್ಲಿ, ಒಡೆಯರ್ ಗಳು ನಿರ್ಮಿಸಿದ ಅನೇಕ ಪಾರಂಪರಿಕ ಕಟ್ಟಡಗಳು ಇಂದು ಸೂಕ್ತ ನಿರ್ವಹಣೆ ಇಲ್ಲದೆ ಉದುರುತ್ತಿವೆ. ಮೊದಲು ಈ ಕಟ್ಟಡಗಳ ಸಂರಕ್ಷಣೆಯತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಡಿ.ಸಿ. ತಮ್ಮಣ್ಣ ಹೇಳಿಕೆ ತಪ್ಪು:
ಒಬ್ಬ ಜನ ಪ್ರತಿನಿಧಿಯಾಗಿ ಸಚಿವ ಡಿ.ಸಿ.ತಮ್ಮಣ್ಣ ಅವರು ಬಹಿರಂಗವಾಗಿ ಮತದಾರರನ್ನು ನಿಂದಿಸಿದ್ದು ತಪ್ಪು ಎಂದು ಮೈಸೂರಿನಲ್ಲಿ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ಹೇಳಿದ್ದಾರೆ.
ಡಿ.ಸಿ. ತಮ್ಮಣ್ಣ ಅವರು ಒಬ್ಬ ಅಧಿಕಾರಿಯಾಗಿ, ಒಬ್ಬ ರಾಜಕೀಯ ನಾಯಕರಾಗಿ ಬೆಳೆದಿದ್ದಾರೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಅದು ಅಲ್ಲದೇ ಒಂದು ದಲಿತ ಕೇರಿಯಲ್ಲಿ ರೀತಿ ಹೇಳುವುದು ಅವರಿಗೆ ಶೋಭೆ ತಾರದು. ಇದು ಅವರು ಲೋಕಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಹೊರ ಬಂದಿಲ್ಲ ಎಂಬುದಕ್ಕೆ ನಿದರ್ಶನ ಎಂದರು.

——

key words : mysore-bjp-nagendra-gramavsathvya-village-stay-jds