ನಿಮಗೆ ಕಣ್ಣು ಕಾಣಲ್ಲ, ಕಿವಿ ಕೇಳಿಸಲ್ಲ, ಪ್ರಸೆನ್ಸ್ ಆಫ್ ಮೈಡ್ ಇಲ್ಲ- ಸಿಎಂ ಬಿಎಸ್ ವೈ ವಿರುದ್ಧ ಹೆಚ್.ವಿಶ್ವನಾಥ್ ನೇರ ವಾಗ್ದಾಳಿ…

ಮೈಸೂರು,ಮೇ,4,2021(www.justkannada.in): ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ.  ನಿಮಗೆ ಕಣ್ಣು ಕಾಣಲ್ಲ, ಕಿವಿ ಕೇಳಿಸಲ್ಲ, ಪ್ರಸೆನ್ಸ್ ಆಫ್ ಮೈಡ್ ಇಲ್ಲ. ನಿಮ್ಮನ್ನ ಕಟ್ಟಿಕೊಂಡು ನಾವೇನ್ ಮಾಡೋಣ.? ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.jk

ಸರ್ಕಾರದ ಕಾರ್ಯವೈಖರಿ ಬಗ್ಗೆ ಪದೇ ಪದೇ ಟೀಕಿಸಿ ಚಾಟಿ ಬೀಸುತ್ತಿದ್ದ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಇದೀಗ ಮತ್ತೆ ಸರ್ಕಾರ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ.  ಮುಖ್ಯಮಂತ್ರಿಯೂ ಸರಿ ಇಲ್ಲ. ಮುಖ್ಯಮಂತ್ರಿ ಬಳಿ ಹೋಯ್ತು ಅಂದ್ರೆ ಆ ಖಾತೆ ಸತ್ತು ಹೋಯ್ತು ಅಂತ ಅರ್ಥ.ನೀವೇ ಬಿಬಿಎಂಪಿ ಸಚಿವರಾಗಿದ್ದೀರಿ. ರಾಜಧಾನಿ ಬೆಂಗಳೂರು ಕೋವಿಡ್‌ನಿಂದ ತತ್ತರಿಸಿ ಹೋಗುತ್ತಿದೆ.  ನೀವು ಎಂದಾದರೂ ಆಚೆ ಬಂದು ನೋಡಿದ್ದೀರಾ.?  ಬಿಬಿಎಂಪಿಗೆ ಹೋಗಿ ಸಭೆ ಮಾಡಿದ್ದೀರಾ. ? ಇಂಧನ ನಿಮ್ಮ ಬಳಿಯೇ ಇದೆ, ಡಿಪಿಆರ್ ನಿಮ್ಮ ಬಳಿಯೇ ಇದೆ.  ಎಲ್ಲ ಖಾತೆಯನ್ನೂ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ‌.? ಎಂದು ಪ್ರಶ್ನಿಸಿದರು.

ಆರೋಗ್ಯ ಇಲಾಖೆ ಫೇಲ್ಯುರ್ ಅಲ್ಲ’ ಇಡೀ ಸರ್ಕಾರವೇ ಫೇಲ್ಯುರ್…

ಸರ್ಕಾರಿ ಆಸ್ಪತ್ರೆಯನ್ನ ಸರಿಯಾಗಿ ಬಳಕೆ ಮಾಡಿಕೊಂಡ್ರೆ. ಖಾಸಗಿ ಆಸ್ಪತ್ರೆಗೆ ಜನರು ಯಾಕೆ ಹೋಗ್ತಾರೆ.? ಜನರನ್ನ ತೆಗೆದುಕೊಂಡು ಹೋಗಿ ಬೇರೆ ಆಸ್ಪತ್ರೆಯಲ್ಲಿ ಮಲಗಿಸ್ತಾ ಇದ್ದಾರೆ.ಆರೋಗ್ಯ ಇಲಾಖೆ ಫೇಲ್ಯುರ್ ಅಲ್ಲ’ ಇಡೀ ಸರ್ಕಾರವೇ ಫೆಲ್ಯುರ್. ಮೊದಲು ಇಡೀ ದೇಶವನ್ನೇ ಲಾಕ್‌ಡೌನ್ ಮಾಡಬೇಕು. ಕನಿಷ್ಠ ಪಕ್ಷ 15 ದಿನದ ಮಟ್ಟಿಗಾದ್ರು ಲಾಕ್‌ಡೌನ್ ಮಾಡಬೇಕು. ಶಾಸಕರ, ಸಚಿವರ ಗಾರ್ಮೆಂಟ್ಸ್ ಇದೆ. ಹಾಗಾಗಿ ಇವರು ಲಾಕ್‌ಡೌನ್ ಮಾಡೋದಕ್ಕೆ ಹಿಂದೇಟು ಆಗ್ತಿದ್ದಾರೆ. ಆದರೆ ಈಗ ಕರೋನಾ ದಂಧೆ ಆಗ್ತಿದೆ ಎಂದು ಸ್ವಪಕ್ಷದ ವಿರುದ್ಧವೇ ಹೆಚ್. ವಿಶ್ವನಾಥ್ ಆಕ್ರೋಶ ಹೊರಹಾಕಿದರು.Mysore-BJP MLC-H. Vishwanath- against- CM BS Yeddyurappa

ಹೆಲ್ತ್ ಮಿನಿಸ್ಟರ್ ಸುಧಾಕರ್ ರಾಷ್ಟ್ರಮಟ್ಟದ ಅಧಿಕಾರಿಗಳ ಜೊತೆ ಮಾಹಿತಿ ಪಡೆದುಕೊಂಡಿದ್ರು. ಆದ್ರೆ ಇದೀಗಾ ಅವರ ದ್ರೌಪತಿ ವಸ್ತ್ರಾಭರಣ ಆಗಿದೆ. ಅವರ ಎಲ್ಲ‌ ಅಧಿಕಾರ ಕಿತ್ತು ಜಗದೀಶ್ ಶೆಟ್ರುಗೆ ಕೊಟ್ರು,  ಅಶ್ವಥ್ ನಾರಾಯಣ್ ಗೆ  ಕೊಟ್ಟರು,  ಆರ್.ಅಶೋಕ್ ಗೆ ಕೊಟ್ಟಿದ್ದಾರೆ. ಇವತ್ತು ಆ‌ ಸುಧಾಕರ್ ಪಾಪಾ ನೀನು ಏನು ಅಂದ್ರೆ? ಹೆಲ್ತ್ ಮಿನಿಸ್ಟರ್ ಎನ್ನಬೇಕು ಅಷ್ಟೇ. ಎಂದು ವ್ಯಂಗ್ಯವಾಡಿದರು.

ಆ ತೇಜಸ್ವಿ ಸೂರ್ಯ ಅವರನ್ನ ಅಭಿನಂದಿಸಬೇಕು. ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಆ ಬಿಬಿಎಂಪಿಯಲ್ಲಿ ಎಷ್ಟು ಜನ ಆಯುಕ್ತರು ಹೋದ್ರು ಬಂದ್ರು. ಇನ್ನೆಷ್ಟು ಆಯುಕ್ತರನ್ನ ಬದಲಾವಣೆ ಮಾಡ್ತಾರೋ ಗೊತ್ತಿಲ್ಲ. ಗೌರವ ಗುಪ್ತಾ 10 ಪರ್ಸೆಂಟ್ ಗುಪ್ತಾ ಎಂದೇ ಪ್ರಸಿದ್ದಿ ಎಂದು ಕಿಡಿಕಾರಿದರು.

Key words: Mysore-BJP MLC-H. Vishwanath- against- CM BS Yeddyurappa