ಚಾಮುಂಡಿ ಮೇಲಾಣೆ, ಇದು ಕಮಿಷನ್ ಗಾಗಿ ಅಲ್ಲ: ಮೈಸೂರಲ್ಲಿ ಮುಂದುವರಿದ ಬಿಜೆಪಿ ಸಂಸದ ಹಾಗೂ ಶಾಸಕರ ‘ಪ್ರತಾಪ’..!

 

ಮೈಸೂರು, ಜ.30, 2022 : (www.justkannada.in news) ಮೈಸೂರಲ್ಲಿ ತಾರಕಕ್ಕೇರಿದ ಸಂಸದ ವರ್ಸಸ್ ಶಾಸಕರ ಜಟಾಪಟಿ. ತಾಕತ್ತಿದ್ದರೆ ಪ್ರತಾಪ್ ಸಿಂಹ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬರಲಿ. ಬಿಜೆಪಿ ಶಾಸಕ ಎಲ್.ನಾಗೇಂದ್ರ ನೇರ ಸವಾಲು.

ನಾನು ನಮ್ಮೂರಲ್ಲಿ ನಾನು ರಾಜಕಾರಣ ಮಾಡಿದ್ದೇನೆ. 25 ವರ್ಷ ಜನರ ಜತೆ ಇದ್ದೇನೆ. ನಾನು ನಿಮ್ಮ ರೀತಿ ಎಲ್ಲಿಂದಲೋ ಬಂದು ರಾಜಕಾರಣ ಮಾಡೋದಲ್ಲ. ನಿಮ್ಮೂರಿನ ಒಂದು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಲ್ಲಿ ಗೆದ್ದು ತೋರಿಸಿ. ನೀವು ಸಂಸದರಾಗಿ 7 ವರ್ಷ ಆಯ್ತು. ನಿಮ್ಮ ನಾಯಕತ್ವದಲ್ಲಿ ಎಷ್ಟು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗೆಲ್ಲಿಸಿದ್ದೀರಿ.

ನೀವೇ ಮುಂದೆ ನಿಂತುಕೊಂಡು 6 ಕಾರ್ಪೋರೇಟರ್‌ಗಳಿಗೆ ಟಿಕೆಟ್ ಕೊಡಿಸಿದ್ರಲ್ಲ, ಎಷ್ಟು ಜನ ಗೆಲ್ಸಿದ್ರಿ ? ಎಂಎಲ್‌ಸಿ ಚುನಾವಣೆಯಲ್ಲಿ ರಘು ಯಾಕೆ ಸೋತರು ? ಹಾದಿ ಬೀದಿಯಲ್ಲಿ ನಿಂತು ಮಾತನಾಡೋದು ರಾಜಕಾರಣ. ಪ್ರತಾಪ್ ಸಿಂಹ ವಿರುದ್ಧ ಶಾಸಕ ನಾಗೇಂದ್ರ ವಾಗ್ದಾಳಿ.

ಮೈಸೂರಿನಲ್ಲಿ ಮನೆ ಮನೆಗೆ ಗ್ಯಾಸ್ ಪೈಪ್ ಅಳವಡಿಕೆ ವಿಚಾರ. ಕಂಪನಿಯವರು ವೈಯಕ್ತಿಕವಾಗಿ ಭೇಟಿ ಮಾಡಿಲ್ಲದಿರಬಹುದು. ಅದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿರುಬಹುದು ಎಂಬ ಸಂಸದ ಪ್ರತಾಪಸಿಂಹ ಆರೋಪಕ್ಕೆ ಶಾಸಕ ನಾಗೇಂದ್ರ ಪ್ರತಿಕ್ರಿಯೆ.

ಚಾಮುಂಡೇಶ್ವರಿ ಆಣೆಗೂ ಇದು ಕಮಿಷನ್‌ಗಾಗಿ ಅಲ್ಲ . ಜನರ ಹಿತದೃಷ್ಟಿಯಿಂದಾಗಿ ನಾನು ಮಾತನಾಡುತ್ತಿದ್ದೇನೆ . ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಇದು ನನ್ನೂರು ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿದೆ. ಗ್ಯಾಸ್ ಯೋಜನೆ ಕಾಮಗಾರಿ ವೇಳೆ ಅನಾಹುತ ಆದರೆ ಯಾರು ಜವಾಬ್ದಾರಿ. ಬೇರೆ ಬೇರೆ ಕಡೆ ಅನಾಹುತಗಳು ಆಗಿವೆ. ಅನಾಹುತಕ್ಕೆ ಯಾರು ಹೊಣೆ ಅಂತ ಕೇಳಿದರೆ ತಪ್ಪಾ ?

ಸಂಸದ ಪ್ರತಾಪಸಿಂಹ ಅವರಿಗೆ ಏಕೆ ಕಂಪನಿ ಮೇಲೆ ಒಲವು ? ಕಂಪನಿಯವರು ನೇರವಾಗಿ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಲಿ. ಅದರ ಡೆಮೋ ನೀಡಲಿ. ಮೈಸೂರಿನಲ್ಲಿ ಶಾಸಕ ಎಲ್ ನಾಗೇಂದ್ರ ಹೇಳಿಕೆ

ಲಾಸ್ಟ್ ಸಿಪ್   : 

ಕಳೆದ ತಿಂಗಳು ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆರ್.ರಘು ಅವರ ಸೋಲಿಗೆ ಯಾರು ಕಾರಣ ಎಂದು ಶಾಸಕ ಎಲ್.ನಾಗೇಂದ್ರ ಪ್ರಶ್ನಿಸಿರುವುದು ಹಲವಾರು ಉಹಾಪೋಹಗಳಿಗೆ ಕಾರಣವಾಗಿದೆ.

ಶಾಸಕ ನಾಗೇಂದ್ರ, ಬಹಿರಂಗವಾಗಿಯೇ ಮಾಧ್ಯಮಗಳ ಮೂಲಕವೇ ಈ ಪ್ರಶ್ನೆ ಕೇಳುವ ಮೂಲಕ ಪರೋಕ್ಷವಾಗಿ ಸಂಸದರ ಪಾತ್ರದ ಬಗ್ಗೆ  ಅನುಮಾನ ವ್ಯಕ್ತಪಡಿಸಿದ್ದ್ರಾ.. ? ಜತೆಗೆ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಆರ್.ಧೃವನಾರಾಯಣ್ ಸಹ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗದ ಅಭ್ಯರ್ಥಿ ಆರ್.ರಘು ಅವರನ್ನು ಬಿಜೆಪಿ ಮುಖಂಡರೇ ಸೋಲಿಸಿದರು ಎಂಬರ್ಥದ ಹೇಳಿಕೆ ನೀಡಿದ್ದರು.

key words : Mysore-bjp-election

 

 

key words : Mysore-mp-commission-allegation