ಮೈಸೂರಿನಲ್ಲಿ ಆಷಾಡ ಶುಕ್ರವಾರಕ್ಕೆ ಬರೋಬ್ಬರಿ 35ಸಾವಿರ ಲಡ್ಡು ಸಿದ್ದ…

ಮೈಸೂರು,ಜು,3,2019(www.justkannada.in): ಮೈಸೂರಿನಲ್ಲಿ ಆಷಾಢ ಶುಕ್ರವಾರಕ್ಕೆ ಸಿಹಿತಿಂಡಿ ಸಿದ್ಧವಾಗಿದ್ದು ಬರೋಬ್ಬರಿ 35ಸಾವಿರ ಲಡ್ಡು ತಯಾರಿಸಲಾಗಿದೆ.

ಪ್ರತಿವರ್ಷದಂತೆ ಈ ವರ್ಷವೂ ನಗರದ ಡಬಲ್ ರೋಡ್ ನಲ್ಲಿರುವ ಚಾಮುಂಡೇಶ್ವರಿ ಸೇವಾ ಬಳಗ ಸಂಘದ ಸದಸ್ಯರು ಲಡ್ಡು ವಿತರಣೆ ಮಾಡಲಿದ್ದು ಇದಕ್ಕಾಗಿ  ಡ್ರೈ ಪ್ರೂಟ್ಸ್ ಮೂಲಕ  ಲಡ್ಡು ತಯಾರಿಸಲಾಗಿದೆ. 16ನೇ ವರ್ಷ ಸತತವಾಗಿ ಪ್ರತಿ ಆಷಾಡ ಶುಕ್ರವಾರದಂದು ಚಾಮುಂಡೇಶ್ವರಿ ಸೇವಾ ಬಳಗ  ಸಂಘದ ಸದಸ್ಯರು ಸಿಹಿ ಹಂಚುತ್ತಿದ್ದಾರೆ.

ಇನ್ನು ಲಡ್ಡು ತಯಾರಿಸುವ ಮುನ್ನ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ ಬಳಿಕ ಮೊದಲು ತಯಾರಿಸಿದವರಿಗೆ  ಶಾಂಪಾಲ್  ನೀಡಿ  ಟೆಸ್ಟ್ ,ಮಾಡಲಾಗುತ್ತದೆ. 30ಕ್ಕೂ ಹೆಚ್ಚು ನುರಿತ ಬಾಣಸಿಗರಿಂದ ಲಡ್ಡು ಪ್ರಸಾದ ತಯಾರಾಗಿದೆ. ಆಷಾಡ ಶುಕ್ರವಾರದಂದು  ಬೆಳಗ್ಗೆಯಿಂದ ರಾತ್ರಿವರೆಗೂ ಅನ್ನ ಸಂತರ್ಪಣೆಯಲ್ಲಿ ಲಡ್ಡು ವಿತರಣೆ ಕಾರ್ಯ ನಡೆಯಲಿದೆ.

ಲಡ್ಡನ್ನ 450 ಕೆಜಿ ಕಡ್ಲೆ ಹಿಟ್ಟು, 60ಕೆಜಿ ಗೋಡಂಬಿ, 10ಕೆಜಿ ಬಾದಾಮಿ. 10ಕೆಜಿ ಸ್ಲೈಸ್  ಬಾದಾಮಿ. 10ಕೆಜಿ ಪಿಸ್ತಾ, 750ಕೆಜಿ ಸಕ್ಕರೆ. 50 ಬೂರ ಸಕ್ಕರೆ, 3 ಟಿನ್ ನಂದಿನಿ ತುಪ್ಪ, 25ಟಿನ್ ಅಡುಗೆ ಎಣ್ಣೆ, 30,ಕೆಜಿ  ಖರ್ಜುರ ,30ಕೆಜಿ ಸ್ಲೈಸ್ ಖರ್ಜುರದಿಂದ ಲಡ್ಡನ್ನ ತಯಾರಿಸಲಾಗಿದೆ.

 

 

key word:  Mysore-ashada shukravar- 35,000 laddus-ready