ಮೈಸೂರಿನ AIISH ನಿವೃತ್ತ ನಿರ್ದೇಶಕಿ ಡಾ.ಎಸ್.ಆರ್.ಸಾವಿತ್ರಿ ನಿಧನ

ಮೈಸೂರು, ಜ.14, 2022 : (www.justkannada.in news ) : ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿವೃತ್ತ ನಿರ್ದೇಶಕಿ, ಡಾ.ಎಸ್.ಆರ್.ಸಾವಿತ್ರಿ ಇಂದು ಮಧ್ಯಾಹ್ನ ನಿಧನರಾದರು.
ಮೈಸೂರಿನ ಬೋಗಾದಿ, ಪ್ರಶಾಂತ್ ನಗರದ ಸ್ವಗೃಹದಲ್ಲಿ ನಿಧನ. 64 ವರ್ಷದ ಡಾ.ಸಾವಿತ್ರಿ, ಕಳೆದ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.
2011 ರಿಂದ 2018 ರ ತನಕ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (AIISH) ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆದಾಗ್ಯೂ, ಡಾ.ಸಾವಿತ್ರಿ ಅವರು ವಾಕ್ ಮತ್ತು ಶ್ರವಣ ಸಮಸ್ಯೆ ಕುರಿತು 5 ಪುಸ್ತಕಗಳನ್ನು ಬರೆದಿದ್ದು, ಈ ಪುಸ್ತಕಗಳನ್ನು ಅಂತರಾಷ್ಟ್ರೀಯ ಪ್ರಕಾಶಕರು ಪ್ರಕಟಿಸಿದ್ದರು.corona Curfew - State Government- april 24-AIISH-close
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲೇ (ALL INDA SPEACH AND HEARING INSTITUTE, MYSORE ) ವಿದ್ಯಭ್ಯಾಸ ಪೂರ್ಣಗೊಳಿಸಿದ ಎಸ್.ಆರ್. ಸಾವಿತ್ರಿ ಅವರು, ಬಳಿಕ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ ಕಡೆಗೆ ಸಂಸ್ಥೆಯ ಉನ್ನತ ಹುದ್ದೆಯಾದ ನಿರ್ದೇಶಕ ಸ್ಥಾನವನ್ನು ನಿರ್ವಹಿಸಿದ್ದು ವಿಶೇಷ.
ಮೃತರಿಗೆ ಪತಿ ಸುಂದರೇಶ್, ಒರ್ವ ಪುತ್ರ ಹಾಗೊ ಸೊಸೆ ಇದ್ದಾರೆ.  ಡಾ.ಎಸ್.ಆರ್.ಸಾವಿತ್ರಿ ಅವರ ನಿಧನಕ್ಕೆ ಅವರ ಅಪಾರ ಶಿಷ್ಯವೃಂದ ಕಂಬನಿ ಮಿಡಿದಿದ್ದಾರೆ. ಇಂದು ಮಧ್ಯಾಹ್ನ ಡಾ.ಸಾವಿತ್ರಿ ಅವರ ಅಂತ್ಯಸಂಸ್ಕಾರ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
key words : mysore-all-india-speach-and-hearing-institute-director-s.r.savaithri-no.more-today