ಮೈಸೂರು ವಿಮಾನ ನಿಲ್ದಾಣವನ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದೇವೆ- ಸಂಸದ ಪ್ರತಾಪ್ ಸಿಂಹ…

kannada t-shirts

ಮೈಸೂರು,ಡಿಸೆಂಬರ್,12,2020(www.justkannada.in): ಮೈಸೂರು ವಿಮಾನ ನಿಲ್ದಾಣವನ್ನ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದೇವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.logo-justkannada-mysore

ಕಡಕೊಳದಲ್ಲಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣದ ಶಂಕುಸ್ಥಾಪನೆ ಕುರಿತ ಸಭೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಳೆದ 5ವರ್ಷದ ಅವಧಿಯಲ್ಲಿ 8 ಟ್ರೈನ್ ಗಳನ್ನ ತಂದ ಏಕೈಕ ಸಂಸದ ಅಂದ್ರೆ ಅದು ನಾನೇ. ಮೈಸೂರಿಗೆ 8 ಹೊಸ ಟ್ರೈನ್ ಗಳನ್ನ ಹಾಗೂ 7 ವಿಮಾನಗಳನ್ನು ತಂದಿದ್ದೇವೆ. ಮೈಸೂರು ವಿಮಾನ ನಿಲ್ದಾಣವನ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದೇವೆ. ಮಲ್ಟಿ ಮಾಡೆಲ್ ಲೊಜಿಸ್ಟಿಕ್ ಪಾರ್ಕ್ ನಿರ್ಮಾಣ ಅವಶ್ಯವಾಗಿದೆ ಎಂದರು.mysore-airport-international-airport-mp-pratap-simha

ಹೊಸ ರೈಲು ಸಂಚಾರ ಬೇಕೆಂದಾಗ ವರ್ಷದ ಬಜೆಟ್ ಕಾಯಬೇಕಿತ್ತು, ಆದರೆ ಪ್ರಧಾನಿ ಮೋದಿ  ಸರ್ಕಾರದಲ್ಲಿ ಯಾವಾಗ ಬೇಕಾದರೂ ಅಗತ್ಯವಿರುವ ಕಡೆ ರೈಲುಗಳನ್ನ ತರಬಹುದು ಅದಕ್ಕೆ ನಾನೇ ಸಾಕ್ಷಿ. ಮುಂದಿನ ದಿನಗಳಲ್ಲಿ ಮುಂಬೈ ಮತ್ತು ಗೋವಾ ಗೆ ರೈಲು ಸಂಚಾರ ಆರಂಭಿಸುವ ಪ್ಲಾನ್ ಇದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಇನ್ನು ಸಾಕಷ್ಟು ಅಡಚಣೆಯೊಂದಿಗೆ 10 ವೇ ಹೈವೇ ನಿರ್ಮಾಣವಾಗುತ್ತಿದೆ. ಈ ಮೂಲಕ ಮೈಸೂರಿನಲ್ಲಿ ಕೈಗಾರಿಕಾ ಉದ್ಯಮ ಹಾಗೂ ಉದ್ಯೋಗದ ಅವಕಾಶಗಳು ಹೆಚ್ಚಾಗಲಿದೆ. ಉದ್ಯೋಗಕ್ಕಾಗಿ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಬದಲು ಮೈಸೂರಿನಲ್ಲೇ ಉದ್ಯೋಗ ಸಿಗುವಂತಾಗಬೇಕು ಎನ್ನುವುದೇ ನಮ್ಮ ಆಶಯ ಎಂದು ನುಡಿದರು.

ಮೈಸೂರಿನ ಜನ ಇತಿಹಾಸದಲ್ಲೆ ಒಬ್ಬ ಸಂಸದನನ್ನ  ಎರಡು ಬಾರಿ ಲೋಕಸಭೆಗೆ ಆಯ್ಕೆ ಮಾಡಿದ್ದಾರೆ. ಉತ್ತಮ ಕೆಲಸ ಮಾಡುವವರನ್ನ ಆಯ್ಕೆಮಾಡುವುದಕ್ಕೆ ಈ ಕ್ಷೇತ್ರವೇ ಸಾಕ್ಷಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಕಡಕೊಳದಲ್ಲಿ ಗ್ರಾಮಪಂಚಾಯ್ತಿ ಚುನಾವಣೆಯ ನೀತಿ ಸಂಹಿತೆ ಇರುವ ಕಾರಣ ಅಲ್ಲಿ ಶಂಕುಸ್ಥಾಪನ ಕಾರ್ಯ ಮಾಡಲು ಆಗ್ತಿಲ್ಲ. ಬದಲಾಗಿ ಮೈಸೂರು ನಗರದಲ್ಲಿ ಮಾಡುತ್ತಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

Key words: Mysore -Airport -International Airport- MP Pratap  simha

website developers in mysore