ಐಸಿಎಂಆರ್ ಫೆಲೋಶಿಪ್  ಪಡೆದ ಮೈಸೂರಿನ ಐಷ್(AIISH) ಸಿಬ್ಬಂದಿ…

ಮೈಸೂರು,ನ,15,2019(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ  ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ.ಅಜೀಶ್ ಕೆ. ಅಬ್ರಹಾಂ ಅವರಿಗೆ ಐಸಿಎಂಆರ್-ಡಿಹೆಚ್ಆರ್ ಅಲ್ಪಾವಧಿಯ ಅಂತರರಾಷ್ಟ್ರೀಯ ಫೆಲೋಶಿಪ್ ದೊರೆತಿದೆ.

ಹಿರಿಯ ಬಯೋಮೆಡಿಕಲ್ ವಿಜ್ಞಾನಿಗಳಿಗೆ ನೀಡಲಾಗುವ  ಫೆಲೋಶಿಪ್ ಇದಾಗಿದೆ.  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಆರೋಗ್ಯ ಸಂಶೋಧನಾ ಇಲಾಖೆ,  ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಈ ಫೆಲೋಶಿಪ್ ನೀಡುತ್ತಿದೆ.

ಕ್ವಾಲ್ಕಾಮ್ ಇನ್ಸ್ಟಿಟ್ಯೂಟ್ ಆಫ್ ಕ್ಯಾಲಿಫೋರ್ನಿಯಾ ಇನ್ಸ್ ಟಿಟ್ಯೂಟ್ ಫಾರ್ ಟೆಲಿಕಮ್ಯುನಿಕೇಶನ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಸ್ಪೀಚ್ ಪ್ರೊಸೆಸಿಂಗ್ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆಗಾಗಿ ಡಾ. ಅಜಿಶ್ ಕೆ. ಅಬ್ರಹಾಂ ಅವರು ಈ ಫೆಲೋಶಿಪ್ ಪಡೆದಿದ್ದಾರೆ.

ಫೆಲೋಶಿಪ್ 2019 ರ ನವೆಂಬರ್ 18 ರಿಂದ 3 ತಿಂಗಳ ಅವಧಿಗೆ ಇರುತ್ತದೆ. ಡಾ. ಅಜಿಶ್ ಕೆ. ಅಬ್ರಹಾಂ ಈ ಪ್ರತಿಷ್ಠಿತ ಫೆಲೋಶಿಪ್ ಪಡೆದ ಅವರು ಐಷ್(AIISH) ನ ಮೊದಲ ಪ್ರಾಧ್ಯಾಪಕರಾಗಿದ್ದಾರೆ.

Key words: mysore- AIISH- Professor-Dr. Ajish K. Abraham-  ICMR Fellowship