ಡ್ರಗ್ಸ್ ಜಾಲದ ವಿರುದ್ದ ಮೈಸೂರಿನಲ್ಲಿ ಸಹಿ ಸಂಗ್ರಹ ಅಭಿಯಾನ…

ಮೈಸೂರು,ಸೆಪ್ಟಂಬರ್,9,2020(www.justkannada.in):  ಡ್ರಗ್ಸ್ ದಂಧೆಯಲ್ಲಿ ಪ್ರಭಾವಿಗಳು, ಸಿನಿಮಾ ನಟ, ನಟಿಯರ ಹೆಸರು ಕೇಳಿ ಬರುತ್ತಿದ್ದು. ಈ ಹಿನ್ನೆಲೆ ಡ್ರಗ್ಸ್ ಜಾಲದ ವಿರುದ್ದ ಮೈಸೂರಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.jk-logo-justkannada-logo

ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ನಶಾಮುಕ್ತ ಭಾರತಕ್ಕಾಗಿ ಮೈಸೂರಿನಲ್ಲಿ ಎಬಿವಿಪಿ ವತಿಯಿಂದ ಸಹಿಸಂಗ್ರಹ ಅಭಿಯಾನ ನಡೆಸಲಾಯಿತು.mysore-abvp-signature-collection-campaign-against-drugs-network

ಮೈಸೂರಿನ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಮುಂಭಾಗ ಸಹಿಸಂಗ್ರಹಿಸಿದ ಎಬಿವಿಪಿ ಸದಸ್ಯರು, ಡ್ರಗ್ ಜಾಲದಲ್ಲಿ ಪ್ರಭಾವಿಗಳು, ಸಿನಿಮಾ ನಟಿಯರು ತೊಡಗಿಕೊಂಡಿರೋದು ವಿಷಾದನೀಯ‌. ರಾಷ್ಟ್ರಘಾತುಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಮತ್ರಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Key words: Mysore – ABVP-Signature- Collection Campaign -Against -Drugs Network.