ಮೈಸೂರಿನ ಹೈಕಮಾಂಡ್ ಎಂದ ಜಿಟಿಡಿಗೆ ನಯವಾಗಿಯೇ ತಿರುಗೇಟು ನೀಡಿದ ಶಾಸಕ ಸಾ.ರಾ.ಮಹೇಶ್…

ಮೈಸೂರು,ಜನವರಿ,08,2021(www.justkannada.in) : ನನ್ನ ಮೈಸೂರು ಹೈಕಮಾಂಡ್ ಅಂಥ ಯಾರು ಹೇಳಿದ್ರು?. ಓಹ್ ಜಿಟಿಡಿ ಹೇಳಿದ್ರಾ? ಹಾಗಾದ್ರೆ, ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ ಬಿಡಿ ಎಂದು ಜಿಟಿಡಿಗೆ ಶಾಸಕ ಸಾ.ರಾ.ಮಹೇಶ್ ನಯವಾಗಿಯೇ ತಿರುಗೇಟು ನೀಡಿದರು.jk-logo-justkannada-mysore

ಮೈಸೂರಿನ ಹೈಕಮಾಂಡ್ ಎಂಬ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಿಟಿಡಿ ಅವರು ಒಂದಿಷ್ಟು ಆರೋಪ ಮಾಡಿದ್ದಾರೆ. ಆದರೆ, ನಮ್ಮ ಎಲ್ಲ ನಾಯಕರ ಜೊತೆ ಅವರು ಚೆನ್ನಾಗಿದ್ದಾರೆ. ಮೊನ್ನೆ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದಾಗ ಜಿಟಿಡಿಯವರೇ ಮೊದಲು ಪೋನ್ ಮಾಡಿದ್ದರು ಎಂದರು.

ಜಿಟಿಡಿ ಹುಟ್ಟುಹಬ್ಬದ ದಿನ ಅನಿತಕ್ಕ ಅವರೇ ಜಿಟಿಡಿಗೆ ಪೋನ್ ಮಾಡಿದ್ದರು. ನಮ್ಮ ಯುವ ನಾಯಕ‌ ನಿಖಿಲ್ ಅವರ ಮನೆಗೆ ಹೋಗಿ ಊಟ ಮಾಡಿ ಬಂದಿದ್ದಾರೆ. ಹಾಗಾಗಿ, ಸ್ವಲ್ಪ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಈ ಬಗ್ಗೆ ನಾನು ಅವರ ಜೊತೆ ಜಲದರ್ಶಿನಿಯಲ್ಲಿ ಮಾತನಾಡಿದ್ದೆ. ಎಲ್ಲವನ್ನ ಸರಿಪಡಿಸಿಕೋಳ್ಳುತ್ತೇವೆ ಎಂದಿದ್ದಾರೆ.

ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗೋದಿಲ್ಲ…!

ನನ್ನ ಕೊನೆ ಉಸಿರು ಇರೋವರೆಗು ನಾನು ಜೆಡಿಎಸ್‌ನಲ್ಲೇ ಇರ್ತಿನಿ. ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗೋದಿಲ್ಲ. ಕೆ.ಆರ್.ನಗರ ಬಿಟ್ಟು ಬೇರೆಲ್ಲೂ ನಾನು ಸ್ಪರ್ಧೆ ಮಾಡಲ್ಲ. ನಾನು ಎಲ್ಲಿ ರಾಜಕೀಯ ಆರಂಭಿಸಿದ್ದೇನೋ‌ ಅಲ್ಲೇ ರಾಜಕೀಯ ನಿವೃತ್ತಿ ಆಗುತ್ತೇನೆ. ಬೇರೆ ಯಾವ ಕ್ಷೇತ್ರಕ್ಕೂ ಹೋಗೋದಿಲ್ಲ ಎಂದರು.

My,Mysore,High Command,Who,you,say,GTD,Legislator,sa.ra.Mahesh

ಜಿಟಿಡಿ ಅವರ ಮಗ ಎಲ್ಲೆಲ್ಲಿ ನಿಲ್ಲಬೇಕು ಅಂತ ನಿರ್ಧಾರ ಆಗಿದೆ. ಅವರಿಗೆ ಹುಣಸೂರು ಕ್ಷೇತ್ರ ಇಷ್ಟ ಆಗಿದೆ ಅಲ್ಲೆ ನಿಲ್ತಾರೆ. ಅವರಿಗೆ ಬೇಕು ಅಂದ್ರೆ ಚಾಮರಾಜದಲ್ಲೂ ನಿಲ್ಲಬಹುದು. ನಮಗೆ ಎರಡು ಕ್ಷೇತ್ರ ಬಿಟ್ಟು ಉಳಿದೆಲ್ಲ ಕಡೆ ಅಭ್ಯರ್ಥಿ ರೆಡಿ ಇದ್ದಾರೆ. ಎಲ್ಲರು ಅವರ ಕೆಲಸ ಆರಂಭಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

English summary….

Sa. Ra. Mahesh reacts to GTDs comment on Mysuru High Command
Mysuru, Jan. 08, 2021 (www.justkannada.in): In his reaction to JDS MLA G.T. Devegowda’s words calling him as Mysuru High Command indirectly, former Minister Sa. Ra. Mahesh today said that they are ready to work as per GTDs command.Sa. Ra. Mahesh reacts to GTDs comment on Mysuru High Command Mysuru, Jan. 08, 2021 (www.justkannada.in): In his reaction to JDS MLA G.T. Devegowda's words calling him as Mysuru High Command indirectly, former Minister Sa. Ra. Mahesh today said that they are ready to work as per GTDs command. "G.T. Devegowda doesn't have any differences with any leaders. He is close to H.D. Devegowda's family. As far as I am concerned, I will never leave JDS. I will stay in this party till my last breath. I won't leave the party, and I will not contest from any other place than K.R. Nagara. I will retire where I started politics. I won't go to any other constituency," he clarified. Keywords: G. T. Devegowda/ Mysuru High Command/ Sa. Ra. Mahesh
“G.T. Devegowda doesn’t have any differences with any leaders. He is close to H.D. Devegowda’s family. As far as I am concerned, I will never leave JDS. I will stay in this party till my last breath. I won’t leave the party, and I will not contest from any other place than K.R. Nagara. I will retire where I started politics. I won’t go to any other constituency,” he clarified.
Keywords: G. T. Devegowda/ Mysuru High Command/ Sa. Ra. Mahesh

key words : My-Mysore-High Command-Who-you-say-GTD-Legislator-sa.ra.Mahesh