ಆಪ್ತರಿಬ್ಬರಿಗೆ ಮೈಮುಲ್ ನಲ್ಲಿ ಕೆಲಸಕ್ಕಾಗಿ ಒತ್ತಾಯಿಸಿದ್ದ ಸಾ.ರಾ.ಮಹೇಶ್ : ಮೈಮುಲ್ ಅಧ್ಯಕ್ಷ ಸಿದ್ದೇಗೌಡ.

 

ಮೈಸೂರು, ಮೇ 15, 2020 : (www.justkannada.in news) : ಮೈಮುಲ್ ನಲ್ಲಿ ತಮ್ಮ ಆಪ್ತರಿಬ್ಬರಿಗೆ ಕೆಲಸ ಕೊಡಿಸುವಂತೆ ಶಾಸಕ ಸಾ.ರಾ. ಮಹೇಶ್ ಒತ್ತಾಯ ಮಾಡಿದ್ದರು ಎಂದು ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಆರೋಪಿಸಿದ್ದಾರೆ.

ಮೈಮುಲ್ ನಲ್ಲಿ ನೇಮಕಾತಿ ಸಂಬಂಧ ಅಕ್ರಮ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಕ್ಕೆ ಪ್ರತಿಯಾಗಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಹೇಳಿದಿಷ್ಟು….

ಮೈಮುಲ್ ನಲ್ಲಿ ತಮ್ಮ ಆಪ್ತರಿಬ್ಬರಿಗೆ ಕೆಲಸ ಕೊಡಿಸುವಂತೆ ಶಾಸಕ ಸಾ.ರಾ. ಮಹೇಶ್ ಒತ್ತಾಯ ಮಾಡಿದ್ದರು. ಆಗ ನಾನು, ಕೆಲಸ ಕೊಡುವುದಕ್ಕೆ ನಾನ್ಯಾರು, ಪರೀಕ್ಷೆ ಎದುರಿಸಿ ಉತ್ತಮ ಅಂಕಗಳಿಸಲಿ ಎಂದು ಹೇಳಿದ್ದೆ. ಸಾ.ರಾ. ಮಹೇಶ್ ಈ ದ್ವೇಷವಿಟ್ಟುಕೊಂಡೇ ಈಗ ಮೈಮುಲ್ ವಿರುದ್ಧ ಆರೋಪ ಮಾಡುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

mymul-mysore-mil-federation-job-controvercy-oppointment-jds-mahesh

ಇವತ್ತು ಸಾ.ರಾ.ಮಹೇಶ್ ಪತ್ರಿಕಾಗೋಷ್ಠಿ ನಡೆಸಿ ಮಾಡಿರುವ ಆರೋಪ ಹಾಗೂ ಬಿಡುಗಡೆ ಮಾಡಿರುವ ಆಡಿಯೋ ಸಂಪೂರ್ಣ ಸುಳ್ಳು. ಇದನ್ನು ಅವರೇ ಸೃಷ್ಠಿಸಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಸಾ.ರಾ.ಮಹೇಶ್ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು.

ಶಾಸಕ ಸಾ.ರಾ.ಮಹೇಶ್ ಪ್ರಸ್ತಾಪಿಸಿರುವ ವ್ಯಕ್ತಿಗಳ ಪೈಕಿ ಮನೋಜ್ ಕುಮಾರ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಈ ಶಿವಣ್ಣ ಯಾರೆಂದು ನನಗೆ ಗೊತ್ತೇ ಇಲ್ಲ. ಒಂದು ಕೋಟಿಗೆ ಸೊನ್ನೆ ಎಷ್ಟು ಎಂಬುವುದೇ ನನಗೆ ಗೊತ್ತಿಲ್ಲ. ಅಂತಹದ್ದರಲ್ಲಿ ನಾನು ಕೋಟಿ ವ್ಯವಹಾರ ಮಾಡುವುದಕ್ಕೆ ಆಗುತ್ತಾ?. ನನ್ನ ಹೆಸರನ್ನ ಕೆಡಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಯಾಕಂದ್ರೆ ಅಂಥ ನೀಚ ಕೆಲಸಗಳನ್ನ ನಾನು ಮಾಡುವುದಿಲ್ಲ. ನಮ್ಮ ವಂಶವೇ ಹುಟ್ಟು ರಾಜಕೀಯ ಎಂದು ಸಾರಾ ಮಹೇಶ್ ವಿರುದ್ಧ ಹರಿಹಾಯ್ದರು.

ಮಾಜಿ ಸಚಿವ, ಶಾಸಕ ಜಿ.ಟಿ. ದೇವೇಗೌಡರನ್ನು ಯಾರು ಏನು ಮಾಡಲಾಗದು. ಅವರನ್ನ ರಾಜಕೀಯವಾಗಿ ತುಳಿಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅವರನ್ನ ತುಳಿಯುತ್ತೇವೆ ಎಂದವರು ಇಂದು ಮಟ್ಟಾ ಆಗಿದ್ದಾರೆ. ಅವರ ಉದ್ದ-ಆಳವನ್ನ ಕಂಡುಹಿಡಿಯುವುದಕ್ಕೆ ಯಾರಿಂದಲೂ ಆಗಲ್ಲ ಎಂದು ತಮ್ಮ ರಾಜಕೀಯ ಗುರು ಜಿಟಿಡಿ ಪರ ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಭರ್ಜರಿ ಬ್ಯಾಟಿಂಗ್ ಮಾಡಿದ್ದು ವಿಶೇಷ.

 

key words : mymul-mysore-mil-federation-job-controvercy-oppointment-jds-mahesh