ಮೈಮುಲ್ ಚುನಾವಣೆ ಫಲಿತಾಂಶ: ಶಾಸಕ ಜಿಟಿಡಿ ಬೆಂಬಲಿಗರಿಗೆ ಭಾರಿ ಮುನ್ನಡೆ…

ಮೈಸೂರು,ಮಾರ್ಚ್,16,2021(www.justkannada.in): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಶಾಸಕ ಜಿ.ಟಿ ದೇವೇಗೌಡರಿಗೆ ಪ್ರತಿಷ್ಟೆಯಾಗಿರುವ  ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಆಡಳಿತ ಮಂಡಳಿ ಚುನಾವಣೆಯ ಮತದಾನ ಇಂದು ನಡೆದಿದ್ದು ಫಲಿತಾಂಶ ಹೊರಬೀಳುತ್ತಿದೆ.jk

ಕ್ಷಣ ಕ್ಷಣಕ್ಕೂ ಮೈಮುಲ್ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಮೂಡಿಸುತ್ತಿದೆ. ಈ ಮಧ್ಯೆ  ಹುಣಸೂರು ವಿಭಾಗದಲ್ಲಿ ಶಾಸಕ ಜಿಟಿ ದೇವೇಗೌಡರ ಬೆಂಬಲಿಗರು ಭಾರಿ ಮುನ್ನಡೆ ಸಾಧಿಸಿದ್ದಾರೆ. ಎಂಟು  ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಇನ್ನು ಮೈಸೂರು ವಿಭಾಗದಲ್ಲಿ ಜಿಟಿ ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್ ಡಿ‌ಕುಮಾರಸ್ವಾಮಿ ಬೆಂಬಲಿಗರು ಸಮಬಲ ಸಾಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರು ವಿಭಾಗದಲ್ಲಿ ಜಿಟಿಡಿಯ ನಾಲ್ಕು ಮಂದಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದರೇ ಶಾಸಕ ಸಾರಾ ಮಹೇಶ್ ಮೂರು ಮಂದಿ ಬೆಂಬಲಿಗರು ಮುನ್ನಡೆ ಸಾಧಿಸಿದ್ದಾರೆ.

ಇನ್ನು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಭಾಮೈದನಿಗೆ ಭಾರಿ ಹಿನ್ನೆಡೆಯಾಗಿದೆ. ಅಭ್ಯರ್ಥಿ ಮಧುಚಂದ್ರ ಆರಂಭದಲ್ಲೇ ಹಿನ್ನೆಡೆ ಕಾಯ್ದುಕೊಂಡಿದ್ದು, ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಪುತ್ರ ಪ್ರಸನ್ನ ಮುನ್ನಡೆ ಸಾಧಿಸಿದ್ದಾರೆ.

ಮಧುಚಂದ್ರ ಹಾಗೂ ಪ್ರಸನ್ನ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು.ಇದೀಗ ಶಾಸಕ ಕೆ.ಮಹದೇವ್ ಪುತ್ರ ಪ್ರಸನ್ನ ಮುನ್ನಡೆ ಸಾಧಿಸುತ್ತಿದ್ದಾರೆ.

Mymul- election- result-lead – MLA- GT devegowda- supporters.
ಕೃಪೆ-internet

ಹುಣಸೂರು ವಿಭಾಗದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಚಾರಕ್ಕಿಳಿದಿದ್ದರು. ಇದರಿಂದಾಗಿ ಮಾಜಿ ಸಚಿವ ರೇವಣ್ಣಗೆ ಮುಖಭಂಗ ಅನುಭವಿಸುವಂತಾಗಿದೆ. ಸಹಕಾರಿ ಧುರೀಣ ಶಾಸಕ ಜಿಟಿಡಿ ಅಂಡ್ ಸನ್ ಮೇಲುಗೈ ಸಾಧಿಸಿದ್ದಾರೆ.

Key words: Mymul- election- result-lead – MLA- GT devegowda- supporters.