ದೇಶದಲ್ಲಿ ಹಿಂದೂಗಳಿಗೆ ಕಡಿಮೆ ಮತ್ತು ಮುಸ್ಲೀಂರಿಗೆ ಹೆಚ್ಚಿನ ಸವಲತ್ತು ಇದೆ-ಮೈಸೂರಿನಲ್ಲಿ ಪೇಜಾವರ ಶ್ರೀಗಳು ಹೇಳಿಕೆ….

kannada t-shirts

ಮೈಸೂರು,ಜೂ,1,2019(www.justkannada.in): ದೇಶದಲ್ಲಿ ಮುಸ್ಲೀಂಮರಿಗೆ ಹೆಚ್ಚಿನ ಸವಲತ್ತು ಇದ್ದರೇ ಹಿಂದೂಗಳಿಗೆ ಕಡಿಮೆ  ಸವಲತ್ತು ಇವೆ. ಈ ರೀತಿ ಪರಿಸ್ಥಿತಿ ಹೋಗಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಅವರು ಆಗ್ರಹಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಪೇಜಾವರ ಶ್ರೀಗಳು,  ಎಲ್ಲಾ ಧರ್ಮದವರು ಒಂದೇ ಸಮನಾದ ಸವಲತ್ತು ಹೊಂದಬೇಕು. ಸರ್ವಧರ್ಮ ಸಮಾನತೆ ದೇಶಾದ್ಯಾಂತ ಜಾರಿಗೆ ಬರಬೇಕು. ಆದರೆ ಮುಸ್ಲೀಂಮರಿಗೆ ಸವಲತ್ತು ಹೆಚ್ಚಿವೆ. ಹಿಂದೂಗಳಿಗೆ ಕಡಿಮೆ ಇವೆ. ಈ ರೀತಿ ಪರಿಸ್ಥಿತಿ ಹೋಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿಯಮಗಳನ್ನ ಜಾರಿಗೆ ತರಬೇಕು. ರಾಮಮಂದಿರ ನಿರ್ಮಾಣ  ಕೇಂದ್ರ ಸರ್ಕಾರದ ಆಧ್ಯತೆ ಆಗಬೇಕು. ದೇಶಾದ್ಯಂತ ಗೋಹತ್ಯೆ ನಿಷೇಧ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ‌ ಬಂದ್ರೆ ಸಂವಿಧಾನ ಬದಲಾವಣೆ ಮಾಡ್ತಾರೆ ಎಂಬ ಬಿಜೆಪಿ ನಾಯಕ ಹೇಳಿಕೆಯನ್ನ ಖಂಡಿಸಿದ ಪೇಜಾವರ ಶ್ರೀಗಳು, ಅಂಬೇಡ್ಕರ ಕೊಟ್ಟ ಸಂವಿಧಾನ ಬಹಳ ವಿಶೇಷವಾದ್ದು. ಇದನ್ನ ಬದಲಾವಣೆ ಮಾಡುತ್ತೇನೆ ಎನ್ನುವುದು ಸರಿಯಲ್ಲ.  ಇಂತಹ ಹೇಳಿಕೆಗಳನ್ನ ಕೊಡುವ ಬಿಜೆಪಿ ನಾಯಕರನ್ನ ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.

ರಾಜ್ಯ ಸಮ್ಮಿಶ್ರ ಸರ್ಕಾರದ ಬಗ್ಗೆ ನಾನು ಮಾತನಾಡಲ್ಲ. ನಾನು ಮೊದಲೇ ಹೇಳಿದ್ದೆ ಮೂರು ಪಕ್ಷದವರು ಸೇರಿ ಸರ್ಕಾರ ರಚನೆ ಮಾಡಬೇಕು ಅಂತ. ಆದರೆ ರಾಜ್ಯದಲ್ಲಿ ಎರಡು ಪಕ್ಷ ಸೇರಿ ಸರ್ಕಾರ ರಚನೆ ಮಾಡಿತ್ತು. ಮೂರು ಪಕ್ಷದವರು ಸೇರಿ ಸರ್ಕಾರ ರಚನೆ ಮಾಡಬೇಕಿತ್ತು. ಇದರಿಂದ ರಾಜ್ಯ ಹಾಗೂ ದೇಶ ಅಭಿವೃದ್ಧಿ ಹೊಂದುತ್ತಿತ್ತು ಎಂದು ಸಮ್ಮಿಶ್ರ ಸರ್ಕಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Key words: Muslims are more privileged-Pajavar Shri statement in Mysore

#mysore #PajavaraShri #Muslims #hindu

website developers in mysore