ಮುನಿರತ್ನ ಅಭಿವೃದ್ಧಿಪರ ಸರಕಾರ ಬರಲು ಕಾರಣರಾಗಿದ್ದಾರೆ : ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು,ಅಕ್ಟೋಬರ್,29,2020(www.justkannada.in) : ಅಭಿವೃದ್ಧಿಪರ ಸ್ಥಿರ ಸರಕಾರಕ್ಕೆ ನಿಮ್ಮೆಲ್ಲರ ಮತ ಮೀಸಲಿರಲಿ. ಕಾಂಗ್ರೆಸ್‌ನಲ್ಲಿದ್ದ ಮುನಿರತ್ನ ಅವರು ಬಿಜೆಪಿ ತತ್ವ-ಸಿದ್ದಾಂತವನ್ನು ಒಪ್ಪಿ ಬಂದಿದ್ದಾರೆ. ಅಭಿವೃದ್ಧಿಪರವಾದ ಸರಕಾರ ಬರಲು ಕಾರಣರಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.jk-logo-justkannada-logo

ಗುರುವಾರ ರಾಜರಾಜೇಶ್ವರಿ ನಗರ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಿರುಸಿನ ಪ್ರಚಾರ ನಡೆಸಿದರು.

ಜೆಪಿ ಪಾರ್ಕ್ ಸಮೀಪದ ಚೌಡೇಶ್ವರಿ ಬಸ್ ನಿಲ್ದಾಣ ಸಮೀಪ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಡಿಸಿಎಂ, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಮುನಿರತ್ನ ಅವರನ್ನು ಗೆಲ್ಲಿಸೋಣ ಪಕ್ಷದ ಕಾರ್ಯಕರ್ತರಿಗೆ ಕರೆ 

ಕಾಂಗ್ರೆಸ್‌ನಲ್ಲಿದ್ದ ಮುನಿರತ್ನ ಅವರು ಬಿಜೆಪಿ ತತ್ವ-ಸಿದ್ದಾಂತವನ್ನು ಒಪ್ಪಿ ಬಂದಿದ್ದಾರೆ. ಅವರೂ ಸೇರಿದಂತೆ ಅವರ ಜತೆ ಬಂದಿರುವ ಅವರ ಬೆಂಬಲಿಗ ಕಾರ್ಯಕರ್ತರನ್ನು ಪ್ರೀತಿಯಿಂದ ಆದರಿಸೋಣ. ಆ ಮೂಲಕ ಮುನಿರತ್ನ ಅವರನ್ನು ಗೆಲ್ಲಿಸೋಣ ಎಂದು ಉಪ ಮುಖ್ಯಮಂತ್ರಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಇದು ಕೋವಿಡ್‌ ಸಂಕಷ್ಟ ಕಾಲ. ಆದರೂ, ಈ ಚುನಾವಣೆ ನಡೆಯಬೇಕಾದ ಅನಿವಾರ್ಯತೆ ಬಂದಿದೆ. ಏತಕ್ಕಾಗಿ ಈ ಚುನಾವಣೆ ಬಂತು ಎಂಬುದನ್ನು ನಾವೆಲ್ಲರೂ ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಕಾರ್ಯಕರ್ತರಿಗೆ ಅವರು ಕಿವಿಮಾತು ಹೇಳಿದರು.Munirat's-Developing-Government-Come-Attributed-DCM Dr.C.N.Ashwatthanarayana

ಮಾಜಿ ಮೇಯರ್‌ ಗೌತಮ್‌ ಕುಮಾರ್‌ ಜತೆ ಕ್ಷೇತ್ರಕ್ಕೆ ಭೇಟಿ 

ಬೆಳಗ್ಗೆಯೇ ಮಾಜಿ ಮೇಯರ್‌ ಗೌತಮ್‌ ಕುಮಾರ್‌ ಜತೆ ಕ್ಷೇತ್ರಕ್ಕೆ ಆಗಮಿಸಿದ ಡಿಸಿಎಂ ಅವರು, ಮತ್ತಿಕೆರೆಯ ಮುತ್ಯಾಲಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪ್ರಚಾರ ಕೈಗೊಂಡರು. ಬಳಿಕ ಮುತ್ಯಾಲನಗರ, ಜೆ.ಪಿ.ಪಾರ್ಕ್‌, ಬಂಡೆಪ್ಪ ಗಾರ್ಡನ್, ಬೃಂದಾವನಗರದಲ್ಲಿ ಮತಯಾಚನೆ ಮಾಡಿದರು.

ಪಾದಯಾತ್ರೆ ಮಾಡಿಕೊಂಡೇ ಮತಯಾಚಿಸಿದ ಡಿಸಿಎಂ

ಬಹುತೇಕ ಕಡೆ ಪಾದಯಾತ್ರೆ ಮಾಡಿಕೊಂಡೇ ಮತಯಾಚಿಸಿದ ಉಪ ಮುಖ್ಯಮಂತ್ರಿಯನ್ನು ಸ್ಥಳೀಯರು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರಲ್ಲದೆ, ಬೆಂಗಳೂರು ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡುತ್ತಿರುವ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಯುವಜನರು, ಮಹಿಳೆಯರು ಡಿಸಿಎಂ ಅವರಿಗೆ ಆದರದ ಸ್ವಾಗತ ಕೋರಿದರು.

ಮಾಜಿ ಮೇಯರ್ ಗೌತಮ್ ಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ರವೀಂದ್ರ, ಸುನಂದಮ್ಮ, ನಂಜುಂಡಪ್ಪ, ಜಯಪ್ರಕಾಶ್, ಬಿಜೆಪಿ ಯುವ ಘಟಕದ ಪ್ರಶಾಂತ್, ಸೇರಿದಂತೆ ಸಾವಿರಾರು ಸಂಖ್ಯೆಯಷ್ಟು ಬಿಜೆಪಿ ಕಾರ್ಯಕರ್ತರು ಡಿಸಿಎಂ ಜತೆಯಲ್ಲಿದ್ದರು.

Munirat's-Developing-Government-Come-Attributed-DCM Dr.C.N.Ashwatthanarayana

key words : Munirat’s-Developing-Government-Come-Attributed-DCM Dr.C.N.Ashwatthanarayana