ಮೈಸೂರು ಬಾಲಭವನ ದುಸ್ಥಿತಿ ಕಂಡು ಮರುಗಿದ ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್….

ಮೈಸೂರು,ಸೆಪ್ಟಂಬರ್,14,2020(www.justkannada.in): ದುಸ್ಥಿತಿಯಲ್ಲಿರುವ ಮೈಸೂರಿನ ಬಾಲಭವನವನ್ನ ಪರಿಶೀಲಿಸಿ ಬೇಸರ ವ್ಯಕ್ತಪಡಿಸಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೆಚ್.ವಿ ರಾಜೀವ್, ಈ ಸಂಬಂಧ ಕ್ರಿಯಾ ಯೋಜನೆ ತಯಾರಿಸಿ ಮುಡಾಗೆ ಸಲ್ಲಿಸುವಂತೆ ಸೂಚನೆ ನೀಡಿದರು.muda-president-hv-rajeev-sadness-mysore-balabhavan

ಮೈಸೂರಿನ ಬಾಲ ಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜು ಮತ್ತು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಬಾಲಭವನ ಸೊಸೈಟಿಯ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಬಾಲಭವನದ ಪರಿಸ್ಥಿತಿ ಕಂಡು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಮರುಕ ವ್ಯಕ್ತಪಡಿಸಿದರು.

1977 ರಿಂದ 30 ವರ್ಷಗಳ ಅವಧಿಗೆ ಮುಡಾ ಗುತ್ತಿಗೆ ಆಧಾರದ ಮೇಲೆ ಬಾಲಭವನಕ್ಕೆ 10 ಎಕರೆ ಜಾಗ ನೀಡಿತ್ತು. ನಂತರ 2007 ರಲ್ಲೇ ಗುತ್ತಿಗೆ ಅವಧಿ ಮುಗಿದಿದ್ದು  ಗುತ್ತಿಗೆ ಅವಧಿ ಮುಗಿದರೂ ಬಾಲಭವನ ಮಾತ್ರ ಈವರೆಗೂ ನವೀಕರಣವಾಗಿಲ್ಲ. ಹೀಗಾಗಿ  ತಕ್ಷಣ ಗುತ್ತಿಗೆ ನವೀಕರಣ ಮಾಡಿಕೊಡುವಂತೆ ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಗೆ ಬಾಲಭವನ ಸೊಸೈಟಿ  ಅಧ್ಯಕ್ಷೆ ಚಿಕ್ಕಮ್ಮ ಬಸವರಾಜು ಮನವಿ ಸಲ್ಲಿಸಿದರು.

ಹಾಗೆಯೇ  ಬಾಲಭವನದ ಈ ದುಸ್ಥಿತಿಗೆ ಹಿಂದಿನ ಅಧ್ಯಕ್ಷರೇ ನೇರ ಹೊಣೆ‌‌. ಹಿಂದಿನ‌ ಅಧ್ಯಕ್ಷರು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಅವರ ನಿರ್ಲಕ್ಷ್ಯದಿಂದ ಬಾಲಭವನ ಈ ಸ್ಥಿತಿ ತಲುಪಿದೆ ಎಂದು ಚಿಕ್ಕಮ್ಮ ಬಸವರಾಜು ಆರೋಪಿಸಿದರು.muda-president-hv-rajeev-sadness-mysore-balabhavan

ಇನ್ನು ಬಾಲಭವನದ ದುಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ ಹೆಚ್.ವಿ ರಾಜೀವ್, 10 ಎಕರೆ ಪ್ರದೇಶದ ಈ ಜಾಗ ಸದ್ಭಳಕೆ ಆಗಬೇಕು. ಆ ನಿಟ್ಟಿನಲ್ಲಿ ಕ್ರಿಯಾ ಯೋಜನೆ ತಯಾರಿಸಿ ಮುಡಾಗೆ ನೀಡಿ. ಮೊದಲು ಮಕ್ಕಳ ರೈಲು ಹಳಿ ಮತ್ತು ಬಾಲಭವನ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಮಾಡಿ. ಕ್ರಿಯಾ ಯೋಜನೆ ಆಧಾರದ ಮೇಲೆ ಅಗತ್ಯ ಸೌಲಭ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.

Key words: Muda –president- HV Rajeev -sadness –mysore- Balabhavan