ಕೊರೋನಾ ವೈರಸ್ ಹೆಸರಲ್ಲಿ ಸೆಟ್ಟೇರಲಿದೆ ಸಿನಿಮಾ..?

ಬೆಂಗಳೂರು,ಮಾ,10(www.justkannada.in): ಪ್ರಪಂಚದಲ್ಲಿ ಸಾಕಷ್ಟು ತಲ್ಲಣ ಮೂಡಿಸಿರುವ  ಕೊರೋನಾ ವೈರಸ್ ಹೆಸರಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಚಿತ್ರವೊಂದು ಸೆಟ್ಟೇರಲು ಸಜ್ಜಾಗಿದೆ.

ಕೊರೋನಾ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದ್ದು, ಈ ಶೀರ್ಷಿಕೆಗಾಗಿ ನಿರ್ಮಾಪಕ ಉಮೇಶ್ ಬಣಕಾರ್ ಮನವಿ ಸಲ್ಲಿಸಿದ್ದಾರೆ. ಈ ಚಿತ್ರವನ್ನು ಬಿಸಿರಕ್ತ ಖ್ಯಾತಿಯ ಶಿವಕುಮಾರ್ ನಿರ್ದೇಶಿಸಲಿದ್ದಾರೆ, ಶೀಘ್ರದಲ್ಲೇ ತಾಂತ್ರಿಕ ವರ್ಗ ಮತ್ತು ಕಲಾವಿದರ ಆಯ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕೊರೋನಾ ಟೈಟಲ್ ರಿಜಿಸ್ಟರ್ ಫಿಕ್ಸ್ ಮಾಡಲಾಗಿದ್ದು, ಆದರೆ ಈ ಚಿತ್ರದ ಮೂಲಕ ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ.