ಕಾರಿನ ಟೈರ್ ಬರ್ಸ್ಟ್ ಆಗಿ  ತಾಯಿ, ಮಗ ಸ್ಥಳದಲ್ಲೇ ಸಾವು.

ಮೈಸೂರು,ಅಕ್ಟೋಬರ್,6,2021(www.justkannada.in): ಕಾರಿನ ಟೈರ್ ಬರ್ಸ್ಟ್ ಆಗಿ ಕಾರು ಅಪಘಾತ ಸಂಭವಿಸಿ ತಾಯಿ ಮಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ಈ ಘಟನೆ ನಡೆದಿದೆ. ದೈವಿಕ್ (12), ಗುಣಲಕ್ಷ್ಮಿ (35) ಮೃತಪಟ್ಟವರು. ಕಾರು ಚಾಲನೆ ಮಾಡುತ್ತಿದ್ದ ಪತಿ ಜಗದೀಶ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಂದು ಮುಂಜಾನೆ 4.30 ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.nice road-Car overturn-driver-death 

ಕಾರಿನ‌ ಮುಂಭಾಗದ ಟೈರ್ ಗಳು ಬರ್ಸ್ಟ್ ಆಗಿ ಕಾರು ಕಂಬಕ್ಕೆ ಗುದ್ದಿ ಈ ಘಟನೆ ನಡೆದಿದೆ. ಈ ಕುರಿತು ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mother – son- die – car- tire- burst-mysore