“ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚಿನ ಅನುದಾನ ಘೋಷಣೆ”; ನಿರ್ಮಲಾ ಸೀತರಾಮನ್ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ”

ಮೈಸೂರು,ಜನವರಿ,02,2021(www.justkannada.in) :  ನಿರ್ಮಲಾ ಸೀತರಾಮನ್ ನಮ್ಮ ರಾಜ್ಯದ ಭಿಕ್ಷೆಯಿಂದ ನೀವು ರಾಜ್ಯಸಭಾ ಸದಸ್ಯೆಯಾಗಿದ್ದಾರೆ. ಆದರೆ, ಕರ್ನಾಟಕದ ಬಗ್ಗೆ ಕಿಂಚಿತ್ತು ಕೃತಜ್ಞತೆ‌ ನಿಮಗೆ ಇಲ್ಲ. ನೀವೂ ಮೂಲತಃ ತಮಿಳುನಾಡಿನವರು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ.jk

ಬಿಜೆಪಿ ಮುಖಂಡರೇ ಮಾನ ಮರ್ಯಾದೆ ಇದ್ದರೆ ಉತ್ತರ ಕೊಡಿ

ಕೇಂದ್ರ ಸರ್ಕಾರದ ಬಜೆಟ್ ಮಂಡನೆ ವಿಚಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಮೂಲತಃ ತಮಿಳುನಾಡಿನವರಾಗಿದ್ದು, ಅಲ್ಲಿಯ ಚುನಾವಣೆಯ ಕಾರಣ ತಮಿಳುನಾಡಿಗೆ 6.2ಲಕ್ಷ ಕೋಟಿ ಅನುದಾನ ಕೊಟ್ಟಿದ್ದೀರ. ಆದರೆ‌, ಕರ್ನಾಟಕಕ್ಕೆ 14 ಸಾವಿರ ಕೋಟಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೀರ. ರಾಜ್ಯದ ಬಿಜೆಪಿ ಮುಖಂಡರೇ ನಿಮಗೆ ಮಾನ ಮರ್ಯಾದೆ ಇದ್ದರೆ ಈ‌ ಬಗ್ಗೆ ಉತ್ತರ ಕೊಡಿ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಇದು ಆತ್ಮ‌ನಿರ್ಭರ್ ಬಜೆಟ್ ಅಲ್ಲ’ ಆತ್ಮ ಬರ್ಬಾದ್ ಬಜೆಟ್

ಇದು ಆತ್ಮ‌ನಿರ್ಭರ್ ಬಜೆಟ್ ಅಲ್ಲ’ ಆತ್ಮ ಬರ್ಬಾದ್ ಬಜೆಟ್. 2013 -14 ರಲ್ಲಿ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ವಿತ್ತೀಯ ಕೊರತೆ  ಶೇ 2.2 ಇತ್ತು. ಈಗ ಶೇ 9.8 ರಷ್ಟಿದೆ. ಇದನ್ನು ನಿವಾರಿಸಲು ಬ್ಯಾಂಕ್ ನಲ್ಲಿರುವ ಸಾರ್ವಜನಿಕರ ಹಣವನ್ನು ಕೇಂದ್ರಸರಕಾರ ವಶಪಡಿಸಿಕೊಳ್ಳಲಿದ್ದು, ಇದರಿಂದ ಸಾರ್ವಜನಿಕರ ಠೇವಣಿ ಹಣಕ್ಕೆ ಕುತ್ತು ಬರಲಿದೆ‌ ಎಂದು ದೂರಿದರು.

2014 ರಲ್ಲಿ ಮೇ ತಿಂಗಳಲ್ಲಿ 52 ಲಕ್ಷ ಕೋಟಿ ರೂ. ಸಾಲ ಇತ್ತು. ಡಿಸೆಂಬರ್ 2020 ಕ್ಕೆ 107 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಕಾಂಗ್ರೆಸ್ ಸರ್ಕಾರ 60 ವರ್ಷದಲ್ಲಿ ಮಾಡಿದ್ದು, ಕೇವಲ 52 ಲಕ್ಷ ಕೋಟಿ ರೂ. ಆದರೆ, 6 ವರ್ಷಗಳಲ್ಲಿ ಮೋದಿ ಸರ್ಕಾರ 107 ಲಕ್ಷ ಕೋಟಿ ರೂ. ಸಾಲ ಮಾಡಿ ಸಾಲದ ಕೂಪಕ್ಕೆ ದೇಶವನ್ನು ತಳ್ಳುತ್ತಿದೆ. 2021-22 ರಲ್ಲಿ 12 ಲಕ್ಷ ಕೋಟಿ ರೂ. ಸಾಲ ಪಡೆಯಲು ಹೊರಟಿದೆ. ಇದು ಬಿಜೆಪಿ ಸಾಧನೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಸರ್ಕಾರ ವಿರುದ್ಧ ಕಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿಕಾರಿದರು.

ಜನಸಾಮಾನ್ಯರು ಎಚ್ಚರ

ಜನಸಾಮಾನ್ಯರು ಎಚ್ಚರದಿಂದ ಇರಿ ಬ್ಯಾಂಕಿನಲ್ಲಿ ನೀವು ಇಟ್ಟ ಫಿಕ್ಸೈಡ್ ಡಿಪಾಸಿಟ್‌ಗು ಸರ್ಕಾರ ಕೈ ಹಾಕುತ್ತೆ. ಅಲ್ಪ,ಸ್ವಲ್ಪ ಹಣ ಕೂಡಿಟ್ಟ ನಿಮ್ಮ ಹಣಕ್ಕು ಕತ್ತರಿ ಬೀಳುತ್ತೆ. ಇದು ಇನ್ನೂ ಆರು ತಿಂಗಳಲ್ಲಿ ನಿಮ್ಮ‌ FD ಹಣಕ್ಕೆ ಕೇಂದ್ರ ಕೈ ಹಾಕಿದರು ಅಚ್ಚರಿ ಇಲ್ಲ. ಜನಸಾಮಾನ್ಯರು ಈಗಲೇ ಈ ಬಗ್ಗೆ ಎಚ್ಚರ ವಹಿಸಿ ಎಂದು ಎಚ್ಚರಿಕೆನೀಡಿದರು. More,Karnataka,Tamil Nadu,Much,Grants,Declaration,Nirmala Sitharaman,KPCC,spokesperson,against,M.Laxman ದೇಶದ ಜನರನ್ನ ಭೀಕ್ಷೆ ಬೇಡುವಂತ ಸ್ಥಿತಿಗೆ ಬಿಜೆಪಿ ತಂದು ಬಿಡುತ್ತದೆ. ಆ ದಿನ ಕೂಲಿ ಮಾಡಬೇಕು, ತಿನ್ನಬೇಕು,  ಏನು ಸಂಪಾದನೆ ಮಾಡಬಾರದು. ಇಂತಹ ಅಜೆಂಡ್ ಬಿಜೆಪಿ ಇಟ್ಕೊಂಡು ಆಡಳಿತ ಮಾಡ್ತಿದೆ ಎಂದು ದೂರಿದರು.

ಎಲ್‌ಐಸಿಯನ್ನ ಖಾಸಗೀಕರಣ ಮಾಡುತ್ತಿದೆ. ಮೂರು ಬ್ಯಾಂಕ್ ಗಳನ್ನ ಪ್ರೈವೇಟ್ ಸೆಕ್ಟರ್‌ಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಜನರನ್ನ ಭಿಕ್ಷೆ ಬೇಡವ ಸ್ಥಿತಿಗೆ ಬಿಜೆಪಿ ಇನ್ನೆರಡು ವರ್ಷದಲ್ಲಿ ತರುವ ಅಜೆಂಡ್ ಇಟ್ಟುಕೊಂಡಿದೆ ಎಂದು ಆರೋಪಿಸಿದರು.

English summary…

More budget allocation for TN than Karnataka: KPCC spokesperson M. Lakshamana criticizes FM Nirmala Sitharaman
Mysuru, Feb. 02, 2021 (www.justkannada.in): KPCC Spokesperson M. Lakshmana today criticized Finance Minister Nirmala Sitharaman stating that though she has become a Rajya Sabha MP from Karnataka she doesn’t has any gratitude and is behaving like a pro Tamil Nadu representative.
Addressing a press meet held in Mysuru today he said, “You hail from Tamil Nadu and hence you have allocated a sum of Rs. 6.2 lakh crore for Tamil Nadu in the union budget. But you have allocated just Rs. 14,000 crore for Karnataka. I would like to ask the State BJP leaders whether they are not ashamed of this,” and has asked the BJP leaders to answer his question.Mr. Pratap simha- Kodagu - KPCC –spokesperson- M Laxman
He strongly criticized the union budget and called it as ‘Atma Barbaad’ budget and not ‘Atma Nirbhar’ budget.
He also warned the common people to be very careful about their bank deposits, as there are all possibilities that the Union Government will eye it and grab.
Keywords: KPCC spokesperson M. Lakshmana/ Finance Minister Nirmala Sitharaman/ Atma Nirbhar budget/ Atma Barbaad budget

key words : More-Karnataka-Tamil Nadu-Much-Grants-Declaration-Nirmala Sitharaman-KPCC-spokesperson-against-M.Laxman