ಒಂದೇ ತಿಂಗಳಲ್ಲಿ ಮೈಸೂರು ರೈಲ್ವೆ ಮ್ಯೂಸಿಯಂಗೆ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ: ಆದಾಯವೆಷ್ಟು ಗೊತ್ತೆ..?

ಮೈಸೂರು,ನವೆಂಬರ್,7,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಅರಮನೆ ಆವರಣಕ್ಕೆ ಸೀಮಿತವಾಗಿದ್ದರೂ ಸಹ ಮೈಸೂರಿನ ರೈಲ್ವೆ ಮ್ಯೂಸಿಯಂ ಒಂದೇ ತಿಂಗಳಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನ ತನ್ನತ್ತ ಸೆಳೆದಿದೆ.jk-logo-justkannada-logo

ಹೌದು , ಮೈಸೂರಿನ ರೈಲ್ವೆ ಮ್ಯೂಸಿಯಂಗೆ ಅಕ್ಟೋಬರ್ ಒಂದೇ ತಿಂಗಳಲ್ಲಿ 10,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು, ಇದೇ ತಿಂಗಳಲ್ಲಿ ರೈಲ್ವೆ ಮ್ಯೂಸಿಯಂಗೆ  3,60,000 ರೂ. ಆದಾಯ ಬಂದಿದೆ.

ಕೊರೊನಾ ಹರಡುತ್ತಿದ್ದ ಹಿನ್ನೆಲೆ ಈ ಬಾರಿ ಮೈಸೂರು ದಸರಾ ಅರಮನೆ ಆವರಣಕ್ಕೆ ಸೀಮಿತವಾಗಿ, ಕೆಲವು ಚಟುವಟಿಕೆಗಳು ನಡೆಯದೇ ಇದ್ದರೂ, ನಗರದ ತುಂಬೆಲ್ಲಾ ದೀಪಾಲಂಕಾರ ಮಾಡಲಾಗಿತ್ತು. ಹಾಗೆಯೇ ರೈಲ್ವೆ ಮ್ಯೂಸಿಯಂಗೂ ಅಲಂಕಾರ ಮಾಡಲಾಗಿತ್ತು. ದಸರಾ ಸಂದರ್ಭದಲ್ಲಿ ಮೊದಲ ಬಾರಿಗೆ ರೈಲ್ವೆ ಮ್ಯೂಸಿಯಂ ದೀಪಾಲಂಕಾರದಿಂದ ಕಂಗೋಳಿಸಿತ್ತು.

ರೈಲ್ವೆ ಮ್ಯೂಸಿಯಂ ನವೀಕರಣ ಮಾಡಲೆಂದು ಒಂದು ವರ್ಷ ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈಗ ರೈಲ್ವೆ ಮ್ಯೂಸಿಯಂ ಪೂರ್ಣ ನವೀಕರಣಗೊಂಡು ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ.

ಅಕ್ಟೋಬರ್​​​​​ನಲ್ಲಿ ರೈಲ್ವೆ ಮ್ಯೂಸಿಯಂಗೆ 3,60,000 ರೂ. ಆದಾಯ ಬಂದಿದ್ದು, ಪ್ರವಾಸಿಗರನ್ನು ಸೆಳೆದ ಜೊತೆಗೆ ಈ ಬಾರಿ ಬಡವರಿಗೆ, ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸಲಾಗಿತ್ತು. ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ರೈಲ್ವೆ ಮ್ಯೂಸಿಯಂಗೆ ಭೇಟಿ ನೀಡಿದ್ದರು.  ಮುಂದಿನ ಬಾರಿಗೆ ಇದಕ್ಕಿಂತ ಹೆಚ್ಚು ಜನರನ್ನು ಸೆಳೆಯಲು ತಯಾರಿ ಮಾಡಲಾಗುತ್ತದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮಹಮ್ಮದ್ ಖಿಲ್ಜಿ ಮಾಹಿತಿ ನೀಡಿದ್ದಾರೆ.

Key words: More than -10 thousand -visitors – Mysore Railway Museum – single month- mysore dasara