ಮುಂಗಾರು ಅಧಿವೇಶನ ಆರು ದಿನಕ್ಕೆ ಮೊಟಕು…

kannada t-shirts

ಬೆಂಗಳೂರು,ಸೆಪ್ಟಂಬರ್,21,2020(www.justkannada.in):  9 ದಿನಗಳ ಕಾಲ ನಡೆಯಬೇಕಿದ್ದ ವಿಧಾನಮಂಡಲ ಅಧಿವೇಶನ ಆರು ದಿನಕ್ಕೆ ಮೊಟಕುಗೊಳಿಸಲು ಸದನ ಕಾರ್ಯಕಲಾಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.jk-logo-justkannada-logo

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ನಡೆದ ಸದನ ಕಾರ್ಯಕಲಾಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಕೊರೋನಾ ಹಿನ್ನೆಲೆ ಸದನ ಕಲಾಪವನ್ನು ಮೂರು ದಿನಕ್ಕೆ ಮೊಟಕುಗೊಳಿಸುವಂತೆ ಆಡಳಿತ ಪಕ್ಷ ಪ್ರಸ್ತಾಪ ಮುಂದಿಟ್ಟಿತು. ಆದರೆ ವಿಪಕ್ಷ ನಾಯಕರು ಸದನ ಕಲಾಪವನ್ನು ಆರು ದಿನಗಳವರೆಗೆ ನಡೆಸುವಂತೆ ಒತ್ತಾಯಿಸಿದರು.Monsoon -session - reduced - six days-meeting

ಹೀಗಾಗಿ ಆರು ದಿನಗಳ ಕಾಲ ವಿಧಾನಸಭೆ ಕಲಾಪ ನಡೆಸಲು ತೀರ್ಮಾನಿಸಲಾಯಿತು. ಸೆಪ್ಟಂಬರ್ 26 ಶನಿವಾರದಂದು ವಿಧಾನಸಭೆ ಕಲಾಪ ಮುಕ್ತಾಯವಾಗಲಿದೆ. ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಕಲಾಪ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Key words: Monsoon -session – reduced – six days-meeting

website developers in mysore