100 ಕಿಸಾನ್​ ಡ್ರೋನ್ ​​ಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ.

ನವದೆಹಲಿ,ಫೆಬ್ರವರಿ,19,2022(www.justkannada.in):  ಆಧುನಿಕ ಕೃಷಿ ಪದ್ಧತಿಯಲ್ಲೊಂದು ಹೊಸ ಅಧ್ಯಾಯ ಶುರುವಾಗಿದ್ದು 100 ಕಿಸಾನ್​ ಡ್ರೋನ್ ​​ಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ  ನೀಡಿದ್ದಾರೆ.

ಭಾರತದ ವಿವಿಧ ನಗರಗಳು, ಪಟ್ಟಣಗಳಲ್ಲಿ 100 ಕಿಸಾನ್​ ಡ್ರೋನ್​​ಗಳಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಕೃಷಿ ಭೂಮಿಗಳಿಗೆ ಕೀಟನಾಶಕ ಸಿಂಪಡಿಸುವ ಡ್ರೋನ್​ ಗಳು ಇವಾಗಿದ್ದು, ಇದರಿಂದ ರೈತರಿಗೆ ತುಂಬ ಅನುಕೂಲವಾಗಲಿವೆ. ಹಾಗೇ, ಆಧುನಿಕ ಕೃಷಿ ಪದ್ಧತಿಯ ನಿರ್ಮಾಣದಲ್ಲಿ ಇದೊಂದು ಹೊಸ ಅಧ್ಯಾಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮೊದಲು ಡ್ರೋನ್​ ಎಂದರೆ ಕೇವಲ ಸೇನೆಗೆ ಸಂಬಂಧಪಟ್ಟಿದ್ದು, ವೈರಿಗಳೊಂದಿಗೆ ಹೋರಾಡಲು ಬಳಸುವಂಥದ್ದು ಎಂದು ಭಾವಿಸಲಾಗುತ್ತಿತ್ತು. ಆದರೆ ಪ್ರಸ್ತುತ 21ನೇ ಶತಮಾನದಲ್ಲಿ ಆಧುನಿಕ ಕೃಷಿ ಪದ್ಧತಿಯೆಡೆಗಿನ ಒಂದು ಹೆಜ್ಜೆಯಾಗಿ ಪರಿಗಣಿಸಲ್ಪಟ್ಟಿದೆ. ಇದೊಂದು ಹೊಸ ಅಧ್ಯಾಯ ಎಂದು ನುಡಿದರು.

Key words:  Prime Minister-Narendra Modi-100 Kisan drones