ಯೋಗ ದಿನದಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ

kannada t-shirts

ಬೆಂಗಳೂರು, ಜೂನ್ 02, 2019 (www.justkannada.in): ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಗೆ ಮೈಸೂರಿನಲ್ಲಿ ಅಗತ್ಯ ಸಿದ್ಧತೆ ನಡೆದಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ಸಾಧ್ಯತೆ ಇದೆ.

ಮೈಸೂರು ಯೋಗ ಒಕ್ಕೂಟದ ಮನವಿಯನ್ನು ಪ್ರಧಾನ ಮಂತ್ರಗಳ ಕಚೇರಿ ಪರಿಗಣಿಸಿದೆ. ಪಿಎಂಒಯಿಂದ 5 ನಗರಗಳ ಪಟ್ಟಿ ಸಿದ್ಧ ಪಡಿಸಲಾಗಿದೆ. ಪ್ರಧಾನಿ ಭಾಗವಹಿಸುವ ನಗರಗಳ ಪಟ್ಟಿಯಲ್ಲಿ ಮೈಸೂರಿಗೂ ಸ್ಥಾನ ಸಿಕ್ಕಿದೆ.

ಪ್ರಧಾನಿ ಕಚೇರಿ ದೆಹಲಿ, ಶಿಮ್ಲಾ, ಅಹಮದಾಬಾದ್, ರಾಂಚಿ ಮತ್ತು ಮೈಸೂರು ಪಟ್ಟಿ ಮಾಡಿದ್ದು, ಈ ಬಗ್ಗೆ ಜಿಲ್ಲಾಡಳಿತಕ್ಕೆ ಪ್ರಧಾನ ಮಂತ್ರಗಳ ಕಚೇರಿಯಿಂದ ಅಧಿಕೃತ ಮಾಹಿತಿ ಬಂದಿದೆ.

ಈಗಾಗಲೇ ದೆಹಲಿ, ಅಹಮದಾಬಾದ್ ಕಾರ್ಯಕ್ರಮಗಳಲ್ಲಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಹೀಗಾಗಿ ಈ ಬಾರಿ ಮೈಸೂರಿಗೆ ಆಗಮಿಸುವ ಸಾಧ್ಯತೆ ಇದೆ. ಪ್ರಧಾನಿ ಆಗಮಿಸಿದರೆ ಮೈಸೂರಿಗೆ ಯೋಗ ನಗರ ಕೀರ್ತಿ ಸಿಗಲಿದೆ.

website developers in mysore