ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ ಎಂಎಲ್ ಸಿ ಹೆಚ್.ವಿಶ್ವನಾಥ್: ಕಾರಣ ಏನು ಗೊತ್ತೆ…?

Promotion

ಮೈಸೂರು,ಏಪ್ರಿಲ್,29,2021(www.justkannada.in): ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ಮಾರಾಟ ಮಾಡಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.jk

ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಕಂಪನಿಯ ಪೂರ್ವಪರ ಯೋಚಿಸದೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. 2 ಸಾವಿರ ಕೋಟಿ ಬಾಕಿ ಇರುವ ಕಂಪನಿ ಇದು. ಸುಪ್ರೀಂ ಕೋರ್ಟ್ ಆದೇಶ ಇದೆ. ಇವರ ಮೇಲೆ ಲೋಕಯುಕ್ತ ಕೇಸ್ ಇದೆ. ಎಫ್ ಐ ಆರ್ ಇದೆ. ಚುನಾವಣೆಗೆ ಸ್ಪರ್ಧಿಸಲಿ ಎನ್ ಓ ಸಿ ಕೇಳ್ತಾರೆ. ಇದು  ಚಾರಿಟೇಬಲ್ ಸಂಸ್ಥೆ ಅಲ್ಲ. ಈ ಕಂಪನಿಯವರು ಬಡವರಲ್ಲ ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಬಡವರಿಗೆ ಒಂದ ಸೈಟ್ ಕೊಡಲೂ ಆಗಿಲ್ಲ. ಕೇವಲ ಒಂದು ಲಕ್ಷದ 20 ಸಾವಿರಕ್ಕೆ ಕೊಟ್ಟಿದ್ದೀರಾ. ಹಾಗಾದರೇ ಸರ್ಕಾರ ರೇಟ್‌ಫಿಕ್ಸ್ ಮಾಡೋಕೆ ಆಧಾರ ಏನು..? ಸಬ್ ರಿಜಿಸ್ಟರ್ ರಿಪೋರ್ಟ್ ಮೇಲೆ ರೇಟ್ ಫಿಕ್ಸ್ ಮಾಡಿದ್ದಾರೆ. ಸೀನಿಯರ್ ಆಫೀಸರ್ ಸೇರಿ ರೇಟ್ ಪಿಕ್ಸ್ ಮಾಡಬೇಕಿತ್ತು. ಕ್ಲಾಸ್ ತ್ರೀ ಆಫೀಸರ್ 3666 ಎಕರೆಗೆ ರೇಟ್ ಫಿಕ್ಸ್ ಮಾಡ್ತಾರೆ ಅಂದ್ರೆ ಏನು…? ಇದು ಹಗಲು ದರೋಡೆ. ಇಂತ ದೊಡ್ಡ ಇಶ್ಯೂನ ಯಾರು ನೋಡಲಿಲ್ಲವೆ. ಈಶ್ವರಪ್ಪ ನೀವು ನೋಡಲಿಲ್ವೆ. ಬಹಳ ಬುದ್ದಿವಂತ ಮಂತ್ರಿ ಸುರೇಶ್ ಕುಮಾರ್ ನೀವು ಇದನ್ನ ನೋಡಲಿಲ್ಲವೆ..? ಎಂದು ಪ್ರಶ್ನಿಸಿದರು.MLC -H. Vishwanath- again- expressed -outrage -against – government-jindal

ನಾನು ಇದನ್ನ ಹೇಳಿದರೆ ನಮ್ಮ‌ ಬಿಜೆಪಿಯವರು ವಿಶ್ವನಾಥ್ ಗೆ ಮಂತ್ರಿ ಸ್ಥಾನ ಸಿಗಲಿಲ್ಲ ಅಂತ ಮಾತಾಡ್ತಾರೆ. ಅಪಪ್ರಚಾರ ಮಾಡ್ತಾರೆ. ಇದನ್ನ ನಾನು ಹೇಳಲಿಲ್ಲ ಅಂದ್ರೆ ಜನರಿಗೆ ಮೋಸ ಮಾಡಿದ ಹಾಗೆ ಆಗುತ್ತದೆ. ನಾನು ಡಾಕುಮೆಂಟ್  ಇಟ್ಟುಕೊಂಡಯ ಮಾತಾಡ್ತಾ ಇದ್ದೀನಿ. ನನ್ನ ಪಕ್ಷದ ನಾಯಕರ ಬಗ್ಗೆ ಗೌರವ ಇದೆ. ನಾಯಕರು ತೆಗೆದುಕೊಂಡ ತೀರ್ಮಾನ ಜನವಿರೋಧಿ ಆದಾಗ ನಾನು ಹೇಳಲೇಬೇಕಾಗುತ್ತದೆ ಎಂದು ಸ್ವಪಕ್ಷದ ವಿರುದ್ಧವೇ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಈ ರಾಜ್ಯದಲ್ಲಿ ವಿರೋದ ಪಕ್ಷ ಸತ್ತೋಗಿದೆ.

ಇದೇ ವೇಳೆ ವಿರೋಧ ಪಕ್ಷದ ವಿರುದ್ದವೂ ಗುಡುಗಿದ ಹೆಚ್.ವಿಶ್ವನಾಥ್, ಈ ರಾಜ್ಯದಲ್ಲಿ ವಿರೋಧ ಪಕ್ಷ ಸತ್ತೋಗಿದೆ. ಹೀಗಾಗಿ ನಾನು ಮಾತಾಡುವ ಸ್ಥಿತಿ ಬಂದಿದೆ. ಸಿದ್ದರಾಮಯ್ಯ ಯಾಕೆ ಮಾತಾಡ್ತಾ ಇಲ್ಲ. ಕುಮಾರಸ್ವಾಮಿ ರಿವರ್ಸ್ ಗೇರ್ ಹಾಕೊಂಡು ಕೂತಿದ್ದಾರೆ. ಪ್ರಧಾನ ಮಂತ್ರಿಗಳಿಗೆ ಈ ವಿಚಾರವಾಗಿ ಪತ್ರ ಬರೆಯುತ್ತೇನೆ ಎಂದರು.

ಖಾಸಗಿ ಆಸ್ಪತ್ರೆಗಳ ಬಗ್ಗೆ ರಾಜಕಾರಣಿಗಳ ಮೌನ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಪುತ್ರನಾದಿಯಾಗಿ ಎಲ್ಲಾ ರಾಜಕಾರಣಿಗಳು ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ. ಹೀಗಾಗಿ ಯಾರು ಕೂಡ ಖಾಸಗಿ ಆಸ್ಪತ್ರೆಯ ದಂಧೆ ಬಗ್ಗೆ ಮಾತಾನಾಡುತ್ತಿಲ್ಲ ಎಂದು ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದರು.

Key words: MLC -H. Vishwanath- again- expressed -outrage -against – government-jindal