ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ಧ ಹೆಚ್.ಡಿಕೆಗೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ತಿರುಗೇಟು.

ಮೈಸೂರು,ಅಕ್ಟೋಬರ್,13,2021(www.justkannada.in):  ಪುಟಗೋಸಿ ವಿಪಕ್ಷ ಸ್ಥಾನಕ್ಕೆ ಮೈತ್ರಿ ಸರ್ಕಾರವನ್ನೇ ತೆಗೆದರು ಎಂದು ಆರೋಪಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯತೀಂದ್ರ ಸಿದ್ಧರಾಮಯ್ಯ, ಕಾಂಗ್ರೆಸ್ 17 ಶಾಸಕರನ್ನ ಕಳೆದುಕೊಳ್ಳಲು ಕಾರಣ ಜೆಡಿಎಸ್ ಮೈತ್ರಿ. ಕಾಂಗ್ರೆಸ್ ಪಕ್ಷ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡ ಪರಿಣಾಮ 17 ಶಾಸಕರನ್ನ ಕಳೆದುಕೊಳ್ಳಬೇಕಾಯಿತು. ಕಾಂಗ್ರೆಸ್ ಗೆ 80 ಶಾಸಕರಿದ್ದರೂ ಮುಖ್ಯಮಂತ್ರಿ ಸ್ಥಾನವನ್ನ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟೆವು. ಆದರೆ ಶಾಸಕರಿಗೆ ಕುಮಾರಸ್ವಾಮಿ ಸೂಕ್ತವಾಗಿ ಸ್ಪಂದಿಸಿಲ್ಲ. ಕಷ್ಟಗಳನ್ನ ಕೇಳಲಿಲ್ಲ ಇದ್ರಿಂದ ಬೇಸತ್ತು ಬಿಟ್ಟು ಹೋಗಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರವೇನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಮೈತ್ರಿ ಪಕ್ಷದಲ್ಲಿ ಸಿದ್ದರಾಮಯ್ಯನವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಈ ಮೂಲಕ  ಕಾಂಗ್ರೆಸ್ ಶಾಸಕರ ಕೆಲಸ ಮಾಡಿಕೊಡಬಹುದಿತ್ತು. ವಿರೋಧ ಪಕ್ಷದ ಸ್ಥಾನ ತೆಗೆದುಕೊಂಡು ಏನು ಮಾಡಬೇಕು. ಅದೇನು ಮುಖ್ಯಮಂತ್ರಿ ಸ್ಥಾನವಾ..? ವಿಪಕ್ಷ ಸ್ಥಾನದಲ್ಲಿದ್ದರೆ ಏನು ಬೆನಿಫಿಟ್ಸ್ ಸಿಗುತ್ತೆ ಅಂತ ಗೊತ್ತಿಲ್ವಾ…? ಅಟ್ಲೀಸ್ಟ್ ಅಧಿಕಾರದಲ್ಲಿ ಇದ್ದಿದ್ರೆ ನಮ್ಮ ಮಾತು ನಡೆಯುತ್ತಿತ್ತು. ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳು ನಗೆಪಾಟಲಿಗೆ ಗುರಿಯಾಗುತ್ತಿದೆ ಎಂದು ಯತೀಂದ್ರ ಸಿದ್ಧರಾಮಯ್ಯ ವ್ಯಂಗ್ಯವಾಡಿದರು.

ಉಪ ಸಮರದಲ್ಲಿ ನಿಮ್ಮ ಅಭ್ಯರ್ಥಿಗಳನ್ನ ನಿಲ್ಲಿಸಲು ಯಾವ ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ. ಹಾಗೆಯೇ ಜೆಡಿಎಸ್ ಮಾಡುತ್ತಿರುವ ತಪ್ಪುಗಳನ್ನ ತಿಳಿಸಲೂ ಸಹ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಿಲ್ಲ ಎಂದು ಟ್ವಿಟ್ ಮೂಲಕ ಯತೀಂದ್ರ ಸಿದ್ಧರಾಮಯ್ಯ ತಿರುಗೇಟು ನೀಡಿದರು.

Key words: MLA -Yitindra Siddaramaiah –tong- HD Kumaraswamy