5 ಬಾರಿ ಕರೆ ಮಾಡಿದ್ರೂ ಸ್ವೀಕರಿಸಲಿಲ್ಲ: ಇಂತಹ ಸಚಿವರಿಗೆ ಸಿಎಂ ಬುದ್ಧಿ ಹೇಳಬೇಕು- ಬಿಜೆಪಿ ಶಾಸಕ ಆಕ್ರೋಶ.

Promotion

ಬಳ್ಳಾರಿ,ಫೆಬ್ರವರಿ,2,2022(www.justkannada.in): ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಸ್ವಪಕ್ಷದ  ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು  ಆರೋಗ್ಯ ಸಚಿವ ಸುಧಾಕರ್ ಗೆ 5 ಬಾರಿ ಕರೆ ಮಾಡಿದ್ಧೆ ಆದರೆ ಕರೆ ಸ್ವೀಕರಿಸಲಿಲ್ಲ. ಮೇಸೇಜ್ ಮಾಡಿದ್ರೂ ಅದಕ್ಕೆ ಪ್ರತಿಕ್ರಿಯಸಿಲ್ಲ.  ಕೆಲ ಸಚಿವರು ಮೇಲಿಂದ ಬಿದ್ಧವರಂತೆ ಮಾತನಾಡುತ್ತಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಶಾಸಕರ ಕರೆ ಸ್ವೀಕರಿಸಲ್ಲ.  ಇಂತಹ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬುದ್ಧಿ ಹೇಳಬೇಕು ಎಂದು ಶಾಸಕ ಸೋಮಶೇಖರ್ ರೆಡ್ಡಿ ಕಿಡಿಕಾರಿದರು.

Key words: MLA-Somashekar reddy-minister-sudhakar