ಮಲೇ ಮಹದೇಶ್ವರ ಬೆಟ್ಟಕ್ಕೆ ಶಾಸಕ ಕೆ.ಎಸ್ ಈಶ್ವರಪ್ಪ ಭೇಟಿ, ಪೂಜೆ ಸಲ್ಲಿಕೆ: ಸರ್ಕಾರಿ ನೌಕರರ ಮುಷ್ಕರ ಕುರಿತು ಅಸಮಾಧಾನ.

ಚಾಮರಾಜನಗರ,ಮಾರ್ಚ್,1,2023(www.justkannada.in): ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ನೌಕರರನ್ನು ಅಣ್ಣತಮ್ಮಂದಿರಂತೆ ನೋಡಿಕೊಂಡಿದೆ. ಆದರೂ ಮುಷ್ಕರದ ಮೂಲಕ ಜನ ಸಾಮಾನ್ಯರಿಗೆ ತೊಂದರೆಯಾದ್ರೆ ಸರ್ಕಾರಿ ನೌಕರರಿಗೆ ಒಳ್ಳೆಯದಾಗಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಆರಂಭಕ್ಕೆ ಕ್ಷಣಗಣನೆ. ಆರಂಭವಾಗಿದ್ದು  ಮಹದೇಶ್ವರ ಬೆಟ್ಟ, ಹನೂರಿನಲ್ಲಿ ಅಂತಿಮ ಹಂತದ ಸಿದ್ಧತೆ ನಡೆಸಲಾಗಿದೆ. ಮಲೆ ಮಹದೇಶ್ವರ ದೇವಾಲಯ ಮುಂಭಾಗ ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ‌.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ಹನೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ ಹಿನ್ನೆಲೆ, ಮಲೆಮಹದೇಶ್ವರ ಬೆಟ್ಟಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಮಲೆಮಹದೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ಕೆ.ಎಸ್ ಈಶ್ವರಪ್ಪ,  ಸರ್ಕಾರಿ ನೌಕರರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗಿತ್ತು. ಯಾವುದೇ ಮುಷ್ಕರಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇದು ಚುನಾವಣಾ ಸಂದರ್ಭ. ಇಂತಹ ಸಂದರ್ಭದಲ್ಲಿ ಮುಷ್ಕರ‌ ಮಾಡಿದ್ರೆ ಸರ್ಕಾರ ಬಗ್ಗುತ್ತೆ ಎಂಬುದು ಅವರ ನಂಬಿಕೆ. ಶ್ರೀ ಜನಸಾಮಾನ್ಯರಿಗೆ ತೊಂದರೆಯಾದ್ರೆ ಸರ್ಕಾರಿ ನೌಕರರಿಗೆ  ಒಳ್ಳೆಯದಾಗಲ್ಲ ಸಮಸ್ಯೆ ಆದಷ್ಟು ಬೇಗ ಪರಿಹಾರವಾಗುತ್ತದೆ ಎಂದರು.

ಯಡಿಯೂರಪ್ಪ ಕಾಂಗ್ರೆಸ್ ಆರೋಪ ಮಾಡುವಷ್ಟು ನೀಚ ಮಟ್ಟಕ್ಕೆ ಹೋಗಲ್ಲ. ಯಡಿಯೂರಪ್ಪ ಅವರ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿದ್ದಾರೆ‌. ಯಡಿಯೂರಪ್ಪ ಅವರ ಮೇಲೆ ಆರೋಪ ಮಾಡುವವರು ಯಾವ ಪಾಪ ಕೂಪಕ್ಕೆ ಹೋಗ್ತಾರೋ ಗೊತ್ತಿಲ್ಲ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅಣ್ಣತಮ್ಮಂದಿರಂತೆ ಇದ್ದಾರೆ. ಸರ್ಕಾರಿ ನೌಕರರ ಮುಷ್ಕರಕ್ಕೆ ಯಡಿಯೂರಪ್ಪ ಅವರ ಜೊತೆ ಸಂಬಂಧ ಕಲ್ಪಿಸುವ ನೀಚತನಕ್ಕೆ ಕಾಂಗ್ರೆಸ್ ಇಳಿಯಬಾರದಿತ್ತು ಎಂದು ಕಿಡಿಕಾರಿದರು.

Key words: MLA -KS Eshwarappa –visits- Male Mahadeshwara Hill,