ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಈಗ ಹೆಚ್ಚುವರಿ ಎಸ್ಪಿ

ಬೆಂಗಳೂರು, 27, ಜುಲೈ 2021 (www.justkannada.in): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರನ್ನು ಮಣಿಪುರ ಸರ್ಕಾರ ಹೆಚ್ಚುವರಿ ಎಸ್‌ಪಿ ಆಗಿ ನೇಮಕ ಮಾಡಿದೆ.

ಮೀರಾಬಾಯಿ ಚಾನು ಭಾರತದ 21 ವರ್ಷಗಳ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಪದಕದ ಬರವನ್ನು ಅಂತ್ಯಗೊಳಿಸಿದ್ದಾರೆ. ಪ್ರಸ್ತುತ ಚೀನಾ ಆಟಗಾರ್ತಿಗೆ ಡೋಪಿಂಗ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂಬ ಸುದ್ದಿಗಳು ಪ್ರಕಟಗೊಂಡಿದ್ದು.

ನಿಯಮಗಳ ಪ್ರಕಾರ ಒಂದು ವೇಳೆ ಅವರು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದರೆ, ಭಾರತದ ಬೆಳ್ಳಿ ಬೆಡಗಿಗೆ ಮೀರಾಬಾಯಿ ಚಾನುಗೆ ಚಿನ್ನದ ಬೆಡಗಿಯಾಗುವ ಅವಕಾಶ ಸಿಗಲಿದೆ.

ಮಿರಾಬಾಯಿ ಚಾನೂಗೂ ಮೊದಲು, ಅನುಭವಿ ಕರ್ಣಂ ಮಲ್ಲೇಶ್ವರಿ 2000 ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.

ENGLISH SUMMARY…

Olympics medal winner Mirabai Chanu an Additional SP now
Bengaluru, July 27, 2021 (www.justkannada.in): The Manipur State Government has appointed Indian weight lifter Mirabai Chanu who won a silver medal in the Tokyo Olympics as the Additional Superintendent of Police.
Mirabai Chanu won a silver medal in the 21 years weightlifting category. In the meantime, it is learnt that the gold medal winner from China is undergoing a doping test and in case she fails in the doping test Mirabai Chanu will be given the gold medal.
In the 2000 Sydney Olympics Karnam Malleshwari from India had won a bronze medal in the women’s weightlifting category, creating history.
Keywords: Mirabai Chanu/ weightlifting/ Tokyo Olympics/ silver medal/ china/ doping test/ gold medal/ Additional Superintendent of Police/ Manipur State Government