ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ:  ಸಾಮಾಜಿಕ ಜಾಲತಾಣದಲ್ಲಿ ಶಾಸಕ‌ ಎಸ್.ಎ ರಾಮದಾಸ್ ಅಸಮಾಧಾನ…

ಮೈಸೂರು,ಜನವರಿ,13,2021(www.justkannada.in):  ಇಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು ಸಿಎಂ ಬಿಎಸ್ ವೈ ಕ್ಯಾಬಿನೆಟ್ ಗೆ 7 ಮಂದಿ ಶಾಸಕರು ನೂತನ ಸಚಿವರಾಗಿ ಸೇರ್ಪಡೆಯಾಗುತ್ತಿದ್ದರೇ ಇತ್ತ ಮಂತ್ರಿಗಿರಿ ಕೈತಪ್ಪಿದ ಶಾಸಕರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.jk-logo-justkannada-mysore

ಈ ನಡುವೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕ‌ ಎಸ್ ಎ ರಾಮದಾಸ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಶಾಸಕ ಎಸ್.ಎ ರಾಮದಾಸ್,  ನಾನೊಬ್ಬ ನಿಜವಾದ ಸ್ವಯಂ ಸೇವಕ ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮಸಾಕ್ಷಿಗೆ ವಿರುದ್ದವಾದದ್ದು. ಇದು ಹಳೆಯ ಮೈಸೂರು ಪ್ರಾಂತ್ಯಕ್ಕೆ ಆದ ಅನ್ಯಾಯ. ಜಿಲ್ಲೆಯ ಬೇರೆ ಯಾರಾನ್ನಾದರೂ ಮಂತ್ರಿ ಮಾಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ministerial position-mysore-MLA -S A Ramadas -upset

ನಾನು 28 ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ. ನಮ್ಮ ವಿಭಾಗದಲ್ಲಿ ಗೆದ್ದ 11 ಜನ ಬಿಜೆಪಿ ಶಾಸಕರಲ್ಲಿ 10 ಜನ ಪಕ್ಷ ಬಿಟ್ಟು ಅನ್ಯ ಪಕ್ಷಕ್ಕೆ  ತೆರಳಿದ್ದರು. ಪಕ್ಷ ನನ್ನ ತಾಯಿ ಅದರ ಘನತೆ ನನ್ನ ಕರ್ತವ್ಯ ಎಂದು ನಾನು ತಿಳಿದಿದ್ದೇನೆ ಎಂದು ಟ್ವೀಟ್ ಮೂಲಕ ತನ್ನ ಶಾಸಕ ಎಸ್ ಎ ರಾಮದಾಸ್ ನೋವು ತೋಡಿಕೊಂಡಿಕೊಂಡಿದ್ದಾರೆ.

Key words:  ministerial position-mysore-MLA -S A Ramadas -upset