ಸಿಎಂ ಹುದ್ದೆ ಅನ್ನೋದು ಅಂಬಾರಿ ಹೊರುವ ಆನೆ ಇದ್ದಂತೆ, ವೈಭವ, ಪ್ರೆಸ್ಟೀಜ್ಗೆ ಅಲ್ಲ ! ಸಿಎಂ ವಿರುದ್ಧ ಯೋಗೇಶ್ವರ್ ವಾಗ್ದಾಳಿ

ಮೈಸೂರು, ಜುಲೈ 04, 2021 (www.justkannada.in): ಸಿಎಂ ಹುದ್ದೆ ಅನ್ನೋದು ಅಂಬಾರಿ ಹೊರುವ ಆನೆ ಇದ್ದಂತೆ. ಸಂವೇಧನ ಶೀಲ ಆಲೋಚನೆಯುಳ್ಳ ಆನೆ ಸೂಕ್ತ. ಸಿಎಂ ಹುದ್ದೆ ವೈಭವ, ಪ್ರೆಸ್ಟೀಜ್‌ಗೆ ಅಲ್ಲ ಎಂದು ಸಚಿವ ಯೋಗೇಶ್ವರ್ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಆಶೋತ್ತರಗಳನ್ನ ಈಡೇರಿಸುವಂತಿರಬೇಕು. ಬದಲಾವಣೆ ಜಗದ ನಿಯಮ. ಅರ್ಜುನ, ಅಭಿಮನ್ಯು ಕೆಲ ವರ್ಷ ಅಂಬಾರಿ ಹೊತ್ತ. ಅಪ್ಪ ಹೊತ್ತ ಅಂತ ಮರಿ ಆನೆಗೆ ಅಂಬಾರಿ ಹೊರಿಸೋಕೆ‌ ಆಗಲ್ಲ. ನನ್ನ ಹಣೆ ಬರ ಏನ್ ಮಾಡೋದು. ದೇವಾಲಯದ ಗೋಪುರದ ಪೌಂಟೇನ್ ತರ ಆಗಿದ್ದೀನಿ ಎಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಪದೇ ಪದೇ 25 ಪರ್ಸೆಂಟ್ ಸರ್ಕಾರ ಅಂತಾರೆ. ವೈಯುಕ್ತಿಕವಾಗಿ ವಿಚಾರ ಇದ್ರೆ ರುಜುವಾತು ಮಾಡಬೇಕು. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮನ್ನೆಲ್ಲಾ ಒಟ್ಟೊಟ್ಟಿಗೆ ಸೇರಿಸಿ ಹೇಳಬಾರದು. ವಿಜಯೇಂದ್ರಗೆ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆ‌ಇಲ್ಲ. ನಮಗಾಗುವ ಚಿತ್ರಹಿಂಸೆ ಯಾರಿಗೆ ಹೇಳೋದು. ನಮ್ಮ‌ಸರ್ಕಾರ ಬಂದರೂ ನಮ್ಮ ಸರ್ಕಾರ ಇದೆ ಎಂಬ ಭಾವನೆ ನಮಗಿಲ್ಲ. ನಮ್ಮ ಸರ್ಕಾರದಲ್ಲಿ ವಿಪಕ್ಷದವರ ಕೈ ಮೇಲಾಗ್ತಿದೆ. ಜಿಪಂ, ತಾಪಂ ಮೀಸಲಾತಿ ಸರ್ಕಾರ ಮಾಡಬೇಕು. ಆದರೆ ಕುಮಾರಸ್ವಾಮಿ ಹೇಳಿದಂತೆ ಮೀಸಲಾತಿ ಮಾಡಿದ್ದಾರೆ. ಅನುಕೂಲ‌ ಬಂದಂತೆ ಮೀಸಲಾತಿ ಹಂಚಿಕೆ‌ ಮಾಡಿದ್ದಾರೆ ಎಂದು ದೂರಿದರು.

ಸಿಎಂ‌ ವಿರುದ್ದ ಸಚಿವ ಸಿ.ಪಿ.ಯೋಗೇಶ್ವರ್ ಬಹಿರಂಗ ಅಸಮಾಧಾನ ಹೊರ ಹಾಕಿದ ಯೋಗೀಶ್ವರ್ ಶ್ರೀರಾಮುಲು ಪಿಎ ವಿರುದ್ಧ ದೂರು ವಿಚಾರಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯಿಸಿದರು. ಅಂಗೈ ಗುಣ್ಣಿಗೆ ಕನ್ನಡಿಯಾಕೆ, ಕರೆದು ಹೇಳಬಹುದಿತ್ತು. ದೂರು ಕೊಡುವಂತ ಅಗತ್ಯವಿರಲಿಲ್ಲ‌ ಎಂದು ಮೈಸೂರಿನಲ್ಲಿ ಸಚಿವ ಸಿ‌.ಪಿ‌.ಯೋಗೇಶ್ವರ್ ಹೇಳಿಕದರು.

ಶಾಸಕ ರಮೇಶ್ ಜಾರಕಿಹೊಳಿ ಷಡ್ಯಂತ್ರಕ್ಕೆ ಬಲಿ ಆಗಿರೋದು ನಿಜ‌. ಆದರೂ ಅವರಿಗೆ ನ್ಯಾಯ ಕೊಡುವಲ್ಲಿ ದುರುದ್ದೇಶದಿಂದ ಡಿಲೇ ಆಗ್ತಿದೆ ಎಂದು ಹೇಳುವ ಮೂಲಕ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದರು.