ಸಿಎಂ ಮತ್ತು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್ ವಿರುದ್ಧ ಸಚಿವ ಸುಧಾಕರ್ ವಾಗ್ದಾಳಿ.

Promotion

ಬಿಳಿಗಿರಿರಂಗನಾಥ ಬೆಟ್ಟ,ಜುಲೈ,6,2022(www.justkannada.in):  ಪಿಎಸ್ ಐ ಅಕ್ರಮ ಹಗರಣದಲ್ಲಿ ಎಡಿಜಿಪಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಬಿಳಿಗಿರಿರಂಗನಾಥ ಬೆಟ್ಟದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ಗೃಹ ಸಚಿವರು ರಾಜೀನಾಮೆ ಕೊಡಬೇಕಿಲ್ಲ. ಪಿಎಸ್ ಐ ಹಗರಣದ ಬಗ್ಗೆ ಗಂಣಭೀರ ತನಿಖೆ ಆಗಿರಲಿಲ್ಲ. ಈಗ ಸರ್ಕಾರ ಪೊಲೀಸ್ ಅಧಿಕಾರಿಗಳನ್ನೇ ಬಂಧಿಸಿದೆ.  ಈ ಬಗ್ಗೆ ಕಾಂಗ್ರೆಸ್ ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಈ  ಹಿಂದೆ ಎಲ್ಲಾ ಹಗರಣ ಮುಚ್ಚಿ ಹಾಕಿದ್ದು ಕಾಂಗ್ರೆಸ್.  ಕೆಂಪಣ್ಣ ಆಯೋಗ ರಿಡೊ ಏನಾಯ್ತು …?  ಕಾಂಗ್ರೆಸ್ ಮಾತನಾಡದಿರುವುದೇ ಒಳ್ಳೆಯದು ಎಂದು ಸಚಿವ ಸುಧಾಕರ್ ಹರಿಹಾಯ್ದರು.

Key words: Minister- Sudhakar – Congress – resignation -CM – Home Minister.