ಪಾದಯಾತ್ರೆ ಕೈ ಬಿಡುವಂತೆ ಮನವಿ ಮಾಡಿದ ಸಚಿವ ಸುಧಾಕರ್ ಗೆ ತಿರುಗೇಟು ನೀಡಿದ ಸಂಸದ ಡಿ.ಕೆ ಸುರೇಶ್.

ಬೆಂಗಳೂರು,ಜನವರಿ,4,2022(www.justkannada.in): ಕೊರೋನಾ ಹೆಚ್ಚಳ ಹಿನ್ನೆಲೆ ಪಾದಯಾತ್ರೆ ಕೈ ಬಿಡುವಂತೆ ಮನವಿ ಮಾಡಿದ ಆರೋಗ್ಯ ಸಚಿವ ಸುಧಾಕರ್ ಗೆ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಡಿ.ಕೆ ಸುರೇಶ್, ಆರೋಗ್ಯ ಸಚಿವರಿಗೆ ನಾನೂ ಮನವಿ  ಮಾಡುತ್ತೇನೆ. ದೇಶದಲ್ಲಿ ಒಮಿಕ್ರಾನ್ ಹೆಚ್ಚಾಗಿದೆ. ಪ್ರಧಾನಿ ಮೋದಿಗೆ ಮನವಿ ಮಾಡಿ. ದೇಶದಲ್ಲಿ ನಡಿತೀರೊ ಎಲ್ಲಾ ರ್ಯಾಲಿ ನಿಲ್ಲಿಸಿ ಎಂದು ಟಾಂಗ್ ನೀಡಿದರು.free rice - BPL card -holders - - Center- MP- DK Suresh

ಹಾಗೆಯೇ ನಿನ್ನೆ ಸಿಎಂ ಸಮ್ಮುಖದಲ್ಲಿ ತಾವು ಮತ್ತು ಸಚಿವ ಅಶ್ವತ್ ನಾರಾಯಣ್ ನಡುವೆ ನಡೆದ ಗಲಾಟೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ಇದು ನನಗೆ ಮಾಡಿದ ಅಪಮಾನ ಅಲ್ಲ. ರಾಮನಗರ ಜನತೆಗೆ ನಾಡಪ್ರಭು ಕೆಂಪೇಗೌಡರಿಗೆ ಮಾಡಿದ ಅಪಮಾನ. ಭಾಷಣ ಸಾಕು ಅಂತ ಸಿಎಂ ಬೊಮ್ಮಾಯಿ ಸನ್ನೆ ಮಾಡಿದ್ರು.   ಆದರೂ ಅಶ್ವಥ್ ನಾರಾಯಣ್ ಭಾಷಣ ನಿಲ್ಲಿಸಲಿಲ್ಲ. ಒಬ್ಬ ಮಂತ್ರಿಯಾಗಿ ಅನವಶ್ಯಕವಾಗಿ ಮಾತನಾಡಿದ್ರು.  ನಾವು ಬಿಜೆಪಿಯವರು ಮಾತನಾಡೋದೆ ಹೀಗೆ. ಗಂಡಾಸಾಗಿದ್ರೆ ಬನ್ನಿ ಎಂದರು.  ಸರ್ಕಾರ ಕಾರ್ಯಕ್ರಮದಲ್ಲಿ ಇಂತ ಮಾತು ಸರಿಯೇ..? ಎಂದು ಪ್ರಶ್ನಿಸಿದರು.

Key words: Minister- Sudhakar- appeals -leave –padayatre-MP-DK Suresh