ಚಾಮುಂಡಿ ಬೆಟ್ಟದಲ್ಲಿ  ಭೂ ಕುಸಿತ ಸ್ಥಳಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಭೇಟಿ, ಪರಿಶೀಲನೆ.

ಮೈಸೂರು,ನವೆಂಬರ್,1,2021(www.justkannada.in): ಇತ್ತೀಚೆಗೆ ಭಾರಿ ಮಳೆಯಿಂದಾಗಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ  ಭೂ ಕುಸಿತ ಉಂಟಾಗಿದ್ದ ಹಿನ್ನೆಲೆ  ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸಿದರು.

ಭೂ ಕುಸಿತವಾಗಿರುವ ಸ್ಥಳ ಸಚಿವ ಎಸ್.ಟಿ ಸೋಮಶೇಖರ್ ಭೇಟಿ ನೀಡಿದ ವೇಳೆ ಸ್ಥಳೀಯ ಶಾಸಕ ಜಿ ಟಿ ದೇವೇಗೌಡ, ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್, ಮುಡಾ ಆಯುಕ್ತ ನಟೇಶ್ ಹಾಗೂ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

ಪರಿಶೀಲನೆ ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಚಾಮುಂಡಿ ಬೆಟ್ಟದ ಅಪಾಯಕಾರಿ ಸ್ಥಳಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ನಡೆಸಲಾಗುವುದು. ಚಾಮುಂಡಿ ಬೆಟ್ಟದ ಅಪಾಯಕಾರಿ ಸ್ಥಳಗಳಲ್ಲಿ ಭೂ ಕುಸಿತ ಆಗದಂತೆ ಶಾಶ್ವತ ಕಾಮಗಾರಿಯ ಅಗತ್ಯವಿದೆ. ಈ ಸಂಬಂಧ ನಾಳೆ ಸಿಎಂ ಜೊತೆ ಚರ್ಚಿಸಲಾಗುವುದು. ನಾಳೆ ಕೆಆರ್ ಎಸ್ ನಲ್ಲಿ ಸಿ ಎಂ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು. ಮೈಸೂರು ಜಿಲ್ಲೆಯ 11 ಶಾಸಕರನ್ನು ನಾಳೆ ಕೆಆರ್ ಎಸ್ ಗೆ ಬರಲು ಹೇಳಿದ್ದೇನೆ. ಇಂದು ಸಹ ಸುದೀರ್ಘ ಸಭೆ ನಡೆಸಿದ್ದೇನೆ. ನಾಳೆ ಸಿಎಂ ಬಂದಾಗ ಎಲ್ಲಾ ಶಾಸಕರು ತಮ್ಮ‌ ಕ್ಷೇತ್ರದ ಬಗ್ಗೆ ಮಾಹಿತಿ‌ ನೀಡಲಿದ್ದಾರೆ ಎಂದರು.

ದೀಪಾವಳಿ ನಂತರ ಸಚಿವ ಸಿ ಸಿ ಪಾಟೀಲ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಲಿದ್ದಾರೆ. ಅವರು ಸಹ ಭೂ ಕುಸಿತವಾಗಿರುವ ಸ್ಥಳವನ್ನು ಪರಿಶೀಲಿಸಲಿದ್ದಾರೆ. ಎಲ್ಲೆಲ್ಲಿ ಅಗತ್ಯವಿದೆಯೋ ಆ ಸ್ಥಳಗಳಲ್ಲಿ ಶಾಶ್ವತ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಸ್.ಟಿ ಸೋಮಶೇಖರ್ ತಿಳಿಸಿದರು.

Key words: Minister- ST Somashekhar- visits -Chamundi Hill – Land- collapse-place