ದಸರಾ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸಚಿವ ಎಸ್.ಟಿ ಸೋಮಶೇಖರ್.

kannada t-shirts

ಮೈಸೂರು,ಅಕ್ಟೋಬರ್,6,2022(www.justkannada.in):  ನಿನ್ನೆ ನಡೆದ ಮೈಸೂರು ದಸರಾ ಐತಿಹಾಸಿಕ ಜಂಬೂಸವಾರಿ ಯಶಸ್ವಿಯಾದ ಹಿನ್ನೆಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ದಸರಾ ಮಹೋತ್ಸವದ ಯಶಸ್ವಿ ಹಿನ್ನೆಲೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ  ಸೋಮಶೇಖರ್, 2022ರ ವಿಶ್ವ ವಿಖ್ಯಾತ ದಸರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿದೆ. ಇಂತಹ ಒಂದು ಅವಕಾಶ ಕೊಟ್ಟ ಮುಖ್ಯಮಂತ್ರಿಗಳು, ಯಡಿಯೂರಪ್ಪ ಅವರಿಗೆ ಧನ್ಯವಾದಗಳು. ಈ ಬಾರಿ ರಾಷ್ಟ್ರಪತಿಗಳ ಕರೆಸಿ ಉದ್ಘಾಟನೆ ಮಾಡಿದರು. 22 ಉಪ ಸಮಿತಿಗಳನ್ನ ರಚಿಸಿ ದಸರಾ ಮಹೋತ್ಸವ ಮಾಡಿದ್ದರು. ನಾನು ಎಲ್ಲದಕ್ಕೂ ಭಾಗವಹಿಸಿದ್ದೇನೆ. ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿದೆ. ಮೈಸೂರಿನ ಎಲ್ಲಾ ನಾಗರೀಕರು ,ಜನ ಪ್ರತಿನಿಧಿಗಳು ನಮ್ಮ ಕಾರ್ಯಕರ್ತರ ಸಹಕಾರದಿಂದ ಯಶಸ್ವಿಯಾಗಿದೆ. 47  ಕಲಾ ತಂಡಗಳು ಜಂಬೂಸವಾರಿಯಲ್ಲಿ ಭಾಗಿಯಾಗಿದ್ದವು. ಸುಮಾರು 6 ಸಾವಿರಕ್ಕೂ ಹೆಚ್ಚು ಪೋಲಿಸ್ ಭದ್ರತೆ ನೀಡಲಾಗಿತ್ತು. ಟಾರ್ಚ್ ಲೈಟ್ ಕೂಡ ಬಹಳ ಯಶಸ್ವಿಯಾಯಿತು. ಮಾಧ್ಯಮ ಪ್ರತಿನಿಧಿಗಳಿಗ ಸಹಕಾರ ಕೂಡ ಉತ್ತಮವಾಗಿತ್ತು. ಸರ್ಕಾರದ ಪರವಾಗಿ ಎಲ್ಲರಿಗೂ ಅಭಿನಂದನೆಗಳನ್ನ ಸಲ್ಲಿಸುವುದಾಗಿ ತಿಳಿಸಿದರು.

ಯುವದಸರಾ ಕೂಡ ಬಹಳ ಯಶಸ್ವಿಯಾಗಿ ಆಯಿತು. ಆಹಾರ ಮೇಳ ಕೂಡ ಬಹಳ ಪ್ರಶಂಸೆಗೆ ಒಳಗಾಯಿತು. ಹೀಗೆ ರೈತ ದಸರಾ, ಕುಸ್ತಿ, ಆರೋಗ್ಯ ದಸರಾಗೆ, ಮಹಿಳಾ ಮಕ್ಕಳ ದಸರಾ ಹೀಗೆ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಇದಕ್ಕೆ ಕಾರಣರಾದ ಅಧಿಕಾರಿ ವರ್ಗ, ಸಿಬ್ಬಂದಿಗಳಿಗೆ ಸಚಿವ ಎಸ್.ಟಿ ಸೋಮಶೇಖರ್ ಅಭಿನಂದನೆ ಸಲ್ಲಿಸಿದರು.

ಹಾಗೆಯೇ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಮೈಸೂರಿನ ಜನತೆಗೆ ನಾನು ಕ್ಷಮೆ ಕೇಳುತ್ತೇನೆ. ಇಷ್ಟು ದೊಡ್ಡ ಕಾರ್ಯಕ್ರಮ ಮಾಡುವಾಗ ಸಣ್ಣಪುಟ್ಟ ತಪ್ಪುಗಳು ಆಗುತ್ತವೆ. ಅದಕ್ಕೆ ನಾನು ನಿಮ್ಮಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಈ ಯಶಸ್ವಿಗೆ ಕಾರಣರಾದ ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ತಡವಾಗಿ ಪುಷ್ಪಾರ್ಚನೆ ಬಗ್ಗೆ ಸ್ಪಷ್ಟನೆ ನೀಡುವಾಗ ನುಣುಚಿಕೊಂಡ ಸಚಿವ ಎಸ್.ಟಿ ಸೋಮಶೇಖರ್.

ನಿನ್ನೆ ಪುಷ್ಪಾರ್ಚನೆಯ ಸಮಯ ಸ್ವಲ್ಪ ತಡವಾಯಿತು. ಅಂಬಾರಿ ಕಟ್ಟುವ ವೇಳೆ ಸ್ವಲ್ಪ ತಡವಾಯಿತು.6 ಗಂಟೆಯವರೆಗೂ ಪುಷ್ಪಾರ್ಚನೆ ಮಾಡಬಹುದಿತ್ತು. ತಡವಾಗಿದ್ದಕ್ಕೆ ಏನೂ ಸಮಸ್ಯೆ ಆಗಲಿಲ್ಲ. ಶುಭ ಸಮಯ ೫.೦೭ ರಿಂದ ೫.೧೮ ರವರೆಗೆ ಪುಷ್ಪಾರ್ಚನೆ ಮಾಡಬೇಕಿತ್ತು. ಆದರೆ, ಪುಷ್ಪಾರ್ಚನೆ ಆಗಿದ್ದು 5.38ಕ್ಕೆ. ಸುಮಾರು 20 ನಿಮಿಷ ತಡವಾದ ಪುಷ್ಪಾರ್ಚನೆಯಾಯಿತು. ಇದರಿಂದ ಏನೂ ಸಮಸ್ಯೆ ಆಗಲಿಲ್ಲ. 6 ಗಂಟೆವರೆಗೂ ಪುಷ್ಪಾರ್ಚನೆ ಮಾಡಬಹುದಿತ್ತು ಎಂದು ಹೇಳಿ ಸಚಿವ ಎಸ್.ಟಿ ಸೋಮಶೇಖರ್ ನುಣುಚಿಕೊಂಡರು.

ಯಾಕ್ರಿ ಯಶವಂತಪುರ ಜನರು ದಸರಾ ನೋಡಬಾರದು ಅಂಥ ಇದಿಯಾ..?

ದಸರಾ ಪಾಸ್ ಗೊಂದಲದ ವಿಚಾರ ಕುರಿತು  ಮಾಧ್ಯಮಗಳ ಪ್ರಶ್ನೆಗೆ ಸಿಟ್ಟಾದ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಯಾಕ್ರಿ ಯಶವಂತಪುರ ಜನರು ದಸರಾ ನೋಡಬಾರದು ಅಂಥ ಇದಿಯಾ..? ದಸರಾ ಸಾರ್ವಜನಿಕರ ದಸರಾ, ಜನ ಸಾಮಾನ್ಯರ ದಸರಾ. ಅದು ಬಿಟ್ಟು ಅನ್ಯತಾ ಭಾವಿಸಬಾರದು. ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದಿದ್ದು ಸಹಜ. ಅದನ್ನೇ ದೊಡ್ಡದಾಗಿ ಬಿಂಬಿಸಬಾರದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ  ಅಸಮಧಾನ ತೋರ್ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್ ನಾಗೇಂದ್ರ, ಜಿಲ್ಲಾಧಿಕಾರಿ ಬಗಾದಿ ಗೌತಮ್,   ಪೋಲಿಸ್ ಕಮಿಷನರ್ ಚಂದ್ರಗುಪ್ತ, ಎಸ್ಪಿ  ಚೇತನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: Minister -ST Somashekhar -success –mysore-dasara.

website developers in mysore