EWS ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಸಚಿವ ಶಿವರಾಂ ಹೆಬ್ಬಾರ್.

ಶಿವಮೊಗ್ಗ,ನವೆಂಬರ್,7,2022(www.justkannada.in): ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ. 10 ರಷ್ಟು ಮೀಸಲಾತಿ ನಿರ್ಧಾರವನ್ನ ಎತ್ತಿ ಹಿಡಿದ ಸುಪ್ರೀಂಕೋರ್ಟ್ ತೀರ್ಪನ್ನ ಸಚಿವ ಶಿವರಾಂ ಹೆಬ್ಬಾರ್ ಸ್ವಾಗತಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಶಿವರಾಂ ಹೆಬ್ಬಾರ್, EWS ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು  ಸ್ವಾಗತಿಸುತ್ತೇನೆ. ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿತ್ತು ಕೇಂದ್ರ ಶೇ.10 ರಷ್ಟು ಮೀಸಲಾತಿ ಜಾರಿಗೆ ಮುಂದಾಗಿತ್ತು.  ಕೆಲವರು ಇದನ್ನ ವಿರೋಧಿಸಿ ಸುಪ್ರೀಂಕೋರ್ಟ್ ಗೆ ಹೋಗಿದ್ದರು. ಯಾವುದೇ ವರ್ಗದಲ್ಲಿರುವ ಪ್ರತಿ ಬಡವನಿಗೆ ಬದುಕುವ ಹಕ್ಕಿದೆ.  ಸುಪ್ರೀಂ ಇದನ್ನು ಸಮರ್ಥಿಸಿಕೊಂಡಿದೆ.  ಕರ್ನಾಟಕದಲ್ಲೂ  ಈ ಮೀಸಲಾತಿ ಅನುಷ್ಟಾನವಾಗಲಿದೆ.  ಸುಪ್ರೀಂ ಕೋರ್ಟ್ ಆದೇಶ ಇಡೀ ದೇಶಕ್ಕೆ ಅನ್ವಯಿಸುತ್ತೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ವಲಸಿಗರಿಗೆ ಡಿಕೆ ಶಿವಕುಮಾರ್  ಆಹ್ವಾನಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ  ಸಚಿವ ಶಿವರಾಂ ಹೆಬ್ಬಾರ್,   ಯಾರೆಲ್ಲಾ ಬರಬೇಕು ಎಂದು ಹೇಳುವ ಅಧಿಕಾರ ಅವರಿಗಿದೆ.  ಆದರೆ  ಯಾರು ಹೋಗಬೇಕು ಎಂದು ಹೇಳುವ ಅಧಿಕಾರ ನಮಗುಂಟು.  ಸೂರ್ಯ ಚಂಧ್ರ ಇರುವವರೆಗೂ ಮತ್ತೆ ಸೇರಿಸಿಕೊಳ್ಳಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದರು. ನಾವೇನು ಅರ್ಜಿ ಹಾಕಿಲ್ಲ ಅರ್ಜಿ ಹಾಕುವ ಅವಶ್ಯಕತೆ ನಮಗಿಲ್ಲ.  ನಾವ್ಯಾರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ವಿಚಾರವೇ ಇಲ್ಲ ಎಂದರು.

Key words: Minister -Shivram Hebbar -welcomed – Supreme Court- verdict – EWS -reservation