‘ಹಳ್ಳಿಹಕ್ಕಿ’ ವಿರುದ್ದ ಮತ್ತೆ ಗುಡುಗು: ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಗೆ ಸವಾಲೆಸೆದ ಸಚಿವ ಸಾ.ರಾ ಮಹೇಶ್…

ಮೈಸೂರು,ಜು,20,2019(www.justkannada.in): ಅತೃಪ್ತ ಶಾಸಕ ಎಚ್ ವಿಶ್ವನಾಥ್ ಅವರು ಕಪ್ಪ ಪಡೆದಿದ್ದಾರೆ ಮತ್ತು ಬಿಜೆಪಿ ನಾಯಕರ ಆಪರೇಷನ್ ಕಮಲಕ್ಕೆ  ಒಳಗಾಗಿದ್ದಾರೆ  ಎಂದು ಆರೋಪ ಮಾಡಿದ್ದ  ಸಚಿವ ಸಾ.ರಾ.ಮಹೇಶ್ ಇದೀಗ ಮತ್ತೆ ಹಳ್ಳಿಹಕ್ಕಿಯನ್ನ ಕೆಣಕಿ ಸವಾಲು ಹಾಕಿದ್ದಾರೆ.

7 ಬಾರಿ ಚುನಾವಣೆ ಎದುರಿಸಿದ್ದೀರಿ. ಅದಕ್ಕೆ ಎಲ್ಲಿಂದ ಹಣ ತಂದ್ರಿ…? ಇದನ್ನ ವಿಧಾನಸಭೆಯಲ್ಲು ಬಹಿರಂಗಪಡಿಸುತ್ತೇನೆ  ಬನ್ನಿ ನೋಡೋಣ ಎಂದು ಜೆಡಿಎಸ್ ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸಾ.ರಾ ಮಹೇಶ್ ಸವಾಲು ಹಾಕಿದ್ದಾರೆ.

ಇಂದು ಮೈಸೂರಿನ ತಮ್ಮ ಕಚೇರಿಯಲ್ಲಿ ದಿಢೀರ್ ಸುದ್ದಿಗೋಷ್ಠಿ  ಕರೆದು ಮಾತನಾಡಿದ  ಸಚಿವ ಸಾ.ರಾ ಮಹೇಶ್, ನಿಮಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಜೆಡಿಎಸ್ ಪಕ್ಷ ಹಾಗೂ ನನ್ನ ಪಕ್ಷದ ವರಿಷ್ಠರು. ಪುನರ್ ಜನ್ಮ ನೀಡಿದ ಪಕ್ಷದ ಋಣ ತೀರಿಸಬೇಕಿದ್ದರೆ ವಿಶ್ವಾಸಮತಕ್ಕೆ ಬನ್ನಿ. ಸೋಮವಾರ ಬಂದು ಸದನದಲ್ಲಿ ನಿಮ್ಮ ಹೇಳಿಕೆ ನೀಡಿ ಎಂದು ತಿಳಿಸಿದ್ದಾರೆ.

ನನ್ನ 30 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾರ ಮೇಲೂ ಆರೋಪ ಮಾಡಿಲ್ಲ. ನನನ್ನ ಹಳೆ ಬಿಜೆಪಿ ಗಿರಾಕಿ ಎಂದಿದ್ದರು. ನನಗೆ ಮಂತ್ರಿ ಸ್ಥಾನ ಕೊಡಿಸಲು ಅವನ್ಯಾರು ಎಂದಿದ್ದರು. ಆದರೆ ನಾನು ಅವರ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿರಲಿಲ್ಲ. ನಿಮಗೆ ಮಂತ್ರಿ ಸ್ಥಾನ ಬೇಡ  ಹಣವೂ ಬೇಡ ಅಂದಿದ್ರಿ. ಈಗ ಯಾಕೆ ಮುಂಬೈಗೆ ವಿಶೇಷ ವಿಮಾನದಲ್ಲಿ ಹೋದ್ರಿ ಎಂದು ಪ್ರಶ್ನಿಸಿದರು.

ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡ್ತಾರೆ. ಪಕ್ಷ ಬಿಟ್ಟು ಹೋಗಲು ನಾನೇ ಕಾರಣ ಅನ್ನುತ್ತಾರೆ. ಈ ವಿಚಾರವಾಗಿ ನೆನ್ನೆ  ಸದನದಲ್ಲಿ ಮಾತನಾಡಿದ್ದೇನೆ. ಜಿ. ಟಿ ದೇವೇಗೌಡ ಸೇರಿದಂತೆ ಹಲವು ನಾಯಕರು ಜೆಡಿಎಸ್ ಗೆ ವಿಶ್ವನಾಥ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ರು. ಆದ್ರೆ ಅದನ್ನ ಲೆಕ್ಕಿಸದೆ ಆಹ್ವಾನಿಸಿದೆ. ಹುಣಸೂರಿನಲ್ಲಿ ಪ್ರಜ್ವಲ್ ಅಥವಾ ಹರೀಶ್ ಗೌಡ ಸ್ಪರ್ಧೆ ಮಾಡಬೇಕಿತ್ತು. ಇಷ್ಟೆಲ್ಲಾ ವಿರೋದದ ನಡುವೆ ವಿಶ್ವನಾಥ್ ಪಕ್ಷಕ್ಕೆ ಬಂದ್ರು. ನಾನು ಎಸ್ ಅನ್ನದಿದ್ದರೆ ಅವರು ಪಕ್ಷಕ್ಕೆ ಬರ್ತಿರಲಿಲ್ಲ. ವಿಶ್ವನಾಥ್ ಸೇರ್ಪಡೆ ಬಗ್ಗೆ ಪಕ್ಷದ ಹೈ ಕಮಾಂಡ್ ಗೆ ನಾನೇ ಒಪ್ಪಿಗೆ ನೀಡಿದ್ದೆ. ಹೀಗಾಗಿ ರಾಜಕೀಯ ಪುನರ್ಜನ್ಮ ನೀಡಿದ್ದು ಜೆಡಿಎಸ್ ಪಕ್ಷ ಹಾಗೂ ನನ್ನ ಪಕ್ಷದ ವರಿಷ್ಠರು. ಪುನರ್ ಜನ್ಮ ನೀಡಿದ ಪಕ್ಷದ ಋಣ ತೀರಿಸಬೇಕಿದ್ದರೆ ವಿಶ್ವಾಸಮತಕ್ಕೆ ಬನ್ನಿ ಎಂದು ಸಚಿವ ಸಾ.ರಾ ಮಹೇಶ್ ಚಾಟಿ ಬೀಸಿದರು.

ನಾನು ಪ್ರಾಮಾಣಿಕನಲ್ಲದಿದ್ದರೂ ಭ್ರಷ್ಟಾಚಾರಿ ಅಲ್ಲಾ ಅಂತಾ ವಿಶ್ವನಾಥ್ ಹೇಳಿದ್ದಾರೆ. ಸಾಲದ ವಿಚಾರ ವಿಶ್ವನಾಥ್ ನನ್ನ ಬಳಿ ಹೇಳಿಕೊಂಡಿದ್ದು ನಿಜ.ನಿಮ್ಮನ್ನ ರಾಜ್ಯಾಧ್ಯಕ್ಷ ಮಾಡಿದ್ವಿ, ನಾವು ಜಾತಿವಾದಿಗಳ..? ನಾನು ವ್ಯವವಹಾರದಲ್ಲಿ ಒಬ್ಬ ಡೆವಲೆಪ್ಪರ್ ಆಗಿದ್ದೇನೆ. ನಾಲ್ಕು ಬಾರಿ ಸ್ಪರ್ಧೆ ಮಾಡಿ ಮೂರು ಭಾರಿ ಕೆ ಆರ್ ನಗರ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅದರಲ್ಲಿ ನಿಮ್ಮ ವಿರುದ್ದವೂ ಜನ ನನ್ನನ್ನ ಗೆಲ್ಲಿಸಿದ್ದಾರೆ. ನೀವು ಒಂಬತ್ತು ಚುನಾವಣೆ ಎದುರಿಸಿದ್ದಿರಲ್ಲಾ ನಿಮಗೆ ಹಣ ಎಲ್ಲಿಂದ ಬಂತು?  ಎಂದು ಹೆಚ್.ವಿಶ್ವನಾಥ್ ಅವರಿಗೆ ಪ್ರಶ್ನಿಸಿದರು.

Key words: Minister-sa ra  Mahesh -challenged –rebel MLA -H.Vishwanath