ಕಡಕ್ನಾತ್ ಎಂಬುದು ‘ಮೋದಿಕೋಳಿ’ ಎಂದೇ ಪ್ರಸಿದ್ಧಿ- ‘ಕಂಟ್ರಿ ಅಂಡ್ ಖಡಕ್’ ಉದ್ಘಾಟಿಸಿ ಸಚಿವ ಪ್ರಭು ಚೌಹಾಣ್ ಹೇಳಿಕೆ.

ಬೆಂಗಳೂರು,ನವೆಂಬರ್,27,2020(www.justkannada.in): ಕರ್ನಾಟಕದಲ್ಲಿಯೇ ಪ್ರಪ್ರಥಮವಾದ ಕಡಕ್ನಾತ್ ಕೋಳಿಯ ವಿಶೇಷ ಸ್ಟೋರ್ ʼಕಂಟ್ರಿ ಅಂಡ್ ಖಡಕ್ʼ ಅನ್ನು ಪಶುಸಂಗೋಪನಾ ಸಚಿವ  ಪ್ರಭು ಚೌಹಾಣ್ ರವರು ಇಂದು ಬೆಳಿಗ್ಗೆ ಕೋರಮಂಗಲದ ನೂರಡಿರಸ್ತೆಯಲ್ಲಿ ಉದ್ಘಾಟಿಸಿದರು.Minister -Prabhu Chauhan -inaugurates -  first –Kadaknath- chicken specialty store

ತದನಂತರ ಮಾತನಾಡಿದ ಸಚಿವ ಪ್ರಭುಚೌಹಾಣ್, “ಕಡಕನಾತ್ ಎಂಬುದುʼಮೋದಿಕೋಳಿʼ ಎಂದೇ ಪ್ರಸಿದ್ಧವಾಗಿದ್ದು ಮಹೇಂದ್ರಸಿಂಗ್ ಧೋನಿಯವರು ಸಹ ಸಾಕುತಿದ್ದಾರೆ. ಪ್ರಧಾನಿಯವರು ಈ ಕೋಳಿಯನ್ನು ಹೆಚ್ಚು ಉಪಯೋಗಿಸಲು ಸಾರ್ವಜನಿಕರಿಗೆ ಕರೆಕೊಟ್ಟಿದ್ದಾರೆ. ಕಡಕ್ನಾತ್ ಕಪ್ಪುಕೋಳಿಯು ಅತಿ ಉತ್ಕ್ರಷ್ಟ ಕೋಳಿಯಾಗಿರುತ್ತದೆ. ಇದು ಕೊಬ್ಬು ಹಾಗೂ ಕೊಲೆಸ್ಟ್ರಾಲ್ ರಹಿತವಾಗಿದ್ದು, ಅತಿಹೆಚ್ಚಿನ ಪ್ರೋಟೀನ್ ಹೊಂದಿರುತ್ತದೆ. ಆದ್ದರಿಂದ, ಸಾರ್ವಜನಿಕರು, ಈ ವಿಶೇಷ ಸ್ಟೋರ್ ಅನ್ನ ಉಪಯೋಗ ಪಡೆದುಕೊಂಡು, ಇದನ್ನು ಸಾಕುತ್ತಿರುವ ರೈತರಿಗೂ ಸಹಕರಿಸಬೇಕಾಗಿ ಕೋರುತ್ತೇನೆ” ಎಂದರು.Minister -Prabhu Chauhan -inaugurates -  first –Kadaknath- chicken specialty store

Key words: Minister -Prabhu Chauhan -inaugurates –  first –Kadaknath- chicken specialty store