ಪ್ರಧಾನಿ ಮೋದಿ ಜತೆ ಸಚಿವರ ಸಭೆ ವಿಚಾರ : ಮಾಜಿ ಸಿಎಂ ಸಿದ್ಧರಾಮಯ್ಯ ಕೊಟ್ಟ ಸಲಹೆ ಏನು ಗೊತ್ತೆ…?

ಬೆಂಗಳೂರು, ಆ.10,2020(www.justkannada.in):  ರಾಜ್ಯದಲ್ಲಿ ಸಂಭವಿಸಿರುವ ಮಹಾಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಈ ಹಿನ್ನೆಲೆ  ನೆರೆ ಹಾವಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಜತೆ ಸಭೆ ನಡೆಸಲಿದ್ದಾರೆ.jk-logo-justkannada-logo

ಈ ಸಂಬಂಧ ಟ್ವೀಟ್ ಮಾಡಿ ರಾಜ್ಯ ಸಚಿವರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕೆಲ ಸಲಹೆಗಳನ್ನ ನೀಡಿದ್ದಾರೆ.  ನೆರೆ ಹಾವಳಿ ಬಗ್ಗೆ ಸಚಿವರ ಜತೆ ಪ್ರಧಾನಿ ಮೋದಿ ಸಭೆ ಸ್ವಾಗತಾರ್ಹ.  ರಾಜ್ಯದ ಅತಿವೃಷ್ಠಿ ಹಾನಿಯ ಬಗ್ಗೆ ರಾಜ್ಯದ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಧೈರ್ಯವಾಗಿ ವಿವರಿಸಿ ಹೆಚ್ಚಿನ ಪರಿಹಾರ ಪಡೆದುಕೊಳ್ಳಲು ಪ್ರಯತ್ನಿಸಿ. ಹಾಗೆಯೇ ಕಳೆದ ವರ್ಷದ ಹಾನಿಯ ಪರಿಹಾರದ ಬಾಕಿಯನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸಬೇಕು  ಎಂದು ಸಲಹೆ ನೀಡಿದ್ದಾರೆ.minister-meeting-pm-modi-advice-former-cm-siddaramaiah

ಕಳೆದ ಬಾರಿ ರಾಜ್ಯ ಅತಿವೃಷ್ಟಿಯಿಂದ ತತ್ತರಿಸುತ್ತಿರುವಾಗ ಕರ್ನಾಟಕದ ಕಡೆ ತಿರುಗಿ ನೋಡದೆ ನಿರ್ಲಕ್ಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಎಚ್ಚೆತ್ತುಕೊಂಡಿದ್ದಾರೆ. ಈ ಅವಕಾಶವನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಳ್ಳಬೇಕು. ಈ ವೇಳೆ ಧೈರ್ಯವಾಗಿ ಹೆಚ್ಚಿನ ಪರಿಹಾರ ಕೇಳಬೇಕು ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

Key words: Minister-meeting – PM Modi- advice – former CM -Siddaramaiah