ಸಚಿವರ ಸಭೆಗೆ ರೈತರನ್ನ ಬಿಡದ ಹಿನ್ನಲೆ: ಸಭಾಂಗಣದ ಮುಂಭಾಗವೇ ಪ್ರತಿಭಟನೆಗೆ ಕುಳಿತ ಅನ್ನದಾತರು..

ಮೈಸೂರು,ಜೂ,20,2019(www.justkannada.in):  ಮೈಸೂರಿನಲ್ಲಿ ಸಚಿವರ ಸಭೆಗೆ ರೈತರನ್ನ ಬಿಡದ ಹಿನ್ನೆಲೆ ಸಭೆ ನಡೆಯುತ್ತಿದ್ದ ಸಭಾಂಗಣ ಮುಂಭಾಗವೇ ರೈತರು ಕುಳಿತು ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿ.ಪಂ ಸಭಾಂಗಣದಲ್ಲಿ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಗೆ ರೈತರನ್ನ ಬಿಡದ ಹಿನ್ನೆಲೆ, ಸಭಾಂಗಣದ ಮುಂಭಾಗವೇ ಕುಳಿತು ರೈತರು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಲವು ಸಮಸ್ಯೆ ಬಗ್ಗೆ ಮನವಿ ಸಲ್ಲಿಸಲು 11ಗಂಟೆಗೆ ಸಚಿವರ ಭೇಟಿಗೆ ರೈತರು ಸಮಯಾವಕಾಶ ಕೋರಿದ್ದರು. ಆದರೆ ರೈತರ ಸಮಸ್ಯೆಗೆ ಸಚಿವರು ಸ್ಪಂದಿಸಲಿಲ್ಲ ಎನ್ನಲಾಗಿದೆ.  ಆ ಹಿನ್ನಲೆಯಲ್ಲಿ ನೇರವಾಗಿ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿರುವ ಸ್ಥಳಕ್ಕೆ ಬಂದ ರೈತರು, ಸಚಿವರು ಆಗಮಿಸುವಂತೆ ಪಟ್ಟುಹಿಡಿದು ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆ ಹಿನ್ನೆಲೆ  ಜಿ.ಪಂ ಸಭಾಂಗಣದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

Key words: minister-meeting-mysore-farmers-protest