ಸಿಎಂ ಬಿಎಸ್ ವೈ ವಿರುದ್ಧ ಸಚಿವ ಈಶ್ವರಪ್ಪ ಪತ್ರ ವಿಚಾರ: ಶಾಸಕ ಎಂ.ಪಿ ರೇಣುಕಾಚಾರ್ಯ ಅಸಮಾಧಾನ…

ಬೆಂಗಳೂರು,ಏಪ್ರಿಲ್,1,2021(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧವೇ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.Illegally,Sand,carrying,Truck,Seized,arrest,driver

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ , ಈಶ್ವರಪ್ಪನವರಂತಹ ಹಿರಿಯ ಸಚಿವರೇ ಸಿಎಂ ವಿರುದ್ದ ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ ಎಂದರೆ ಹೇಗೆ? ನಾಲ್ಕು ಗೋಡೆಗಳ ನಡುವೆ ಚರ್ಚೆ ಮಾಡಿ ಇದನ್ನು ಬಗೆ ಹರಿಸಿಕೊಳ್ಳಬೇಕಿತ್ತು. ಈಗ ಉಪ-ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಹೀಗೆ ಮಾಡಿರೋದರಿಂದ ಚುನಾವಣೆ ಮೇಲೆ ಪರಿಣಾಮ ಬೀರಲ್ವಾ? ಪಕ್ಷದ ಇಮೇಜ್ ಹಾಳಾಗೋದಿಲ್ವಾ ಎಂದು ಪ್ರಶ್ನಿಸಿದ್ದಾರೆ.Minister-KS eswarappa- letter -against -CM BS Yeddyurappa-MLA- MP Renukacharya

ನಾವು ಅರವತ್ತು ಶಾಸಕರು ಸಿಎಂರನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡಿದ್ದರಿಂದ ಅವರು ಬಿಡುಗಡೆ ಮಾಡಿದ್ದಾರೆ ಅದರಲ್ಲಿ ತಪ್ಪೇನು? ಈ ಮೊದಲು ಈಶ್ವರಪ್ಪನವರಿಗೂ ಭೇಟಿ ಮಾಡಿ ಮನವಿ ಮಾಡಿದ್ದೆವು. ಆದರೆ ಅವರು ಸ್ಪಂದಿಸಿರಲಿಲ್ಲ. ಹೀಗಾಗಿ ವಿಧಿಯಿಲ್ಲದೆ ಸಿಎಂರನ್ನು ಭೇಟಿ ಮಾಡಬೇಕಾಯ್ತು ಎಂದು ಶಾಸಕ ಎಂ.ಬಿ ರೇಣುಕಾಚಾರ್ಯ ತಿಳಿಸಿದ್ದಾರೆ.

Key words: Minister-KS eswarappa- letter -against -CM BS Yeddyurappa-MLA- MP Renukacharya