ಚಾಮುಂಡೇಶ್ವರಿ ಕ್ಷೇತ್ರದಲ್ಲಿ 15 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ದಿಗೆ ಸಚಿವ ಜಿ.ಟಿ ದೇವೇಗೌಡರಿಂದ ಚಾಲನೆ…

kannada t-shirts

ಮೈಸೂರು,ಜೂ,4,2019(www.justkannada.in):  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಂಗಳವಾರ ಒಟ್ಟು ರೂ. 15.00 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ  ಜಿ.ಟಿ.ದೇವೇಗೌಡ ಅವರು ಚಾಲನೆ ನೀಡಿದರು.

ರೂ. 10.00 ಕೋಟಿ  ವೆಚ್ಚದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸಕ್ರ್ಯೂಟ್ ಹೌಸ್ ಜಿಲ್ಲಾ ಮುಖ್ಯ ರಸ್ತೆ ಕಿ.ಮಿ.0.00 ರಿಂದ 9.60 ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.

ರೂ. 2.00 ಕೋಟಿ ವೆಚ್ಚದಲ್ಲಿ ಮೈಸೂರು ತಾಲ್ಲೂಕು ಉಂಡವಾಡಿ, ಮಲ್ಲೇಗೌಡನಕೊಪ್ಪಲು, ಮೇಗಳಾಪುರ, ಮೈದನಹಳ್ಳಿ, ಬೆಳಗೊಳ ಸೇರುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು. ರೂ. 3.41 ಕೋಟಿ ವೆಚ್ಚದಲ್ಲಿ ಇಲವಾಲ-ಸಾಗರಕಟ್ಟೆ ರಸ್ತೆಯಿಂದ ಚಿಕ್ಕನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಿಕ ಸುರೇಶ್, ತಾ.ಪಂ.ಉಪಾಧ್ಯಕ್ಷರಾದ ಎನ್.ಬಿ.ಮಂಜು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Minister GT Deve Gowda, who launched the road development in Chamundeshwari Assembly constituency

#Mysore #GTDeveGowda #Chamundeshwariconstituency #roaddevelopment

website developers in mysore