ಅಂತರಾಷ್ಟ್ರೀಯ ಯೋಗ ದಿನ: ಈ ಬಾರಿ ಗಿನ್ನಿಸ್ ರೆಕಾರ್ಡ್ ಟ್ರೈ ಮಾಡಲ್ಲ ಎಂದ್ರು ಸಚಿವ ಜಿ.ಟಿ ದೇವೇಗೌಡರು…

ಮೈಸೂರು,ಜೂ,4,2019(www.justkannada.in):  ಅಂತರಾಷ್ಟ್ರೀಯ ಯೋಗ ದಿನಕ್ಕೆ ಈ ಬಾರಿಯ ತಯಾರಿ ಬೇಕಾದ ರೀತಿಯಲ್ಲಿ ಇಲ್ಲ. ಹೀಗಾಗಿ ಈ ಬಾರಿ ಗಿನ್ನಿಸ್ ರೆಕಾರ್ಡ್ ಗೆ ಟ್ರೈ ಮಾಡಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ತಿಳಿಸಿದರು.

ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ಬಗ್ಗೆ ಮಾತನಾಡಿದ ಸಚಿವ ಜಿ.ಟಿ ದೇವೇಗೌಡರು, ಈ ಬಾರಿಯೂ ಅಂತರಾಷ್ಟ್ರೀಯ ಯೋಗ ದಿನವನ್ನ ಯಶಸ್ವಿಯಾಗಿ ಆಚರಣೆ ಮಾಡಲಾಗುವುದು. ಕಳೆದ ಬಾರಿಯೂ ಸಹ ಯಶಸ್ವಿಯಾಗಿ ರೇಸ್ ಕೋರ್ಸ್ ಆಯೋಜನೆ ಮಾಡಲಾಗಿತ್ತು. ಅದೇ ರೀತಿ ಈ ಬಾರಿಯೂ ಅಯೋಜನೆ ಮಾಡಲಾಗುತ್ತದೆ. ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಯೋಗ ಪಟುಗಳು ಭಾಗಿಯಾಗಲಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ತಯಾರಿಯು ನಡೆದಿದೆ ಎಂದು ತಿಳಿಸಿದರು.

ಈ ಬಾರಿ ಕೇಂದ್ರ ಸಚಿವರನ್ನು ಸಹ ಯೋಗ ದಿನದಂದು ಕರೆತರುವ ಕೆಲಸ ಮಾಡಲಾಗುವುದು. ಕೆಲವು ಸಂಘಟನೆಗಳು ವಿಶ್ವ ದಾಖಲೆಗೆ ಪ್ರಯತ್ನ ಮಾಡಬೇಕು ಎಂದು ಕೇಳಿದ್ದಾರೆ. ಆದ್ರೇ ಈಬಾರಿಯ ತಯಾರಿ ಅದಕ್ಕೆ ಬೇಕಾದ ರೀತಿಯಲ್ಲಿ ಇಲ್ಲ ಅದಕ್ಕೇ ಈಬಾರಿ ಗಿನ್ನಿಸ್ ರೆಕಾರ್ಡ್ ಟ್ರೈ ಮಾಡಲ್ಲ. ಮುಂದಿನ ವರ್ಷ ಸೂಕ್ತ ತರಬೇತಿ ನೀಡಿ ನಂತರ ಗಿನ್ನಿಸ್ ದಾಖಲೆ ಪ್ರಯತ್ನ ಮಾಡಲಾಗುತ್ತೆ. ಶಾಲಾ ಮಕ್ಕಳ, ಕಾಲೇಜು ವಿಧ್ಯಾರ್ಥಿಗಳು, ಹಾಗೂ ಸರ್ಕಾರಿ ನೌಕರರು ಸಂಘ ಸಂಸ್ಥೆಗಳಿಗೆ ಈ ಕುರಿತು ತರಬೇತಿ ನೀಡಿಲಾಗುತ್ತೆ ಎಂದು  ಸಚಿವ ಜಿ.ಟಿ ದೇವೇಗೌಡರು ತಿಳಿಸಿದರು.

ಇನ್ನು ತಾವು ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ನಾನು ಬಿಜೆಪಿಗೆ ಹೋಗುವ ಪ್ರಮೇಯವೇ ಇಲ್ಲ. ಈ ಬಗ್ಗೆ ನನಗೆ ಯಾವೊಬ್ಬ ನಾಯಕನು ಕೂಡ ಮಾತನಾಡಿಲ್ಲ. ನಾನು ಬಿಜೆಪಿಯಲ್ಲಿ 5ವರ್ಷ ಇದ್ದು ಬಂದಿದ್ದೇನೆ. ಅಲ್ಲಿಯ ನಾಯಕರು ಹೇಗೆ‌..? ಏನು ಎಂಬುದನ್ನ ನೋಡಿ ಬಂದಿದ್ದೇನೆ. 1974ರ ರೆಡ್ಡಿ ಕಾಂಗ್ರೆಸ್ ನಿಂದ ಇಲ್ಲಿಯವರೆಗು ಎಲ್ಲ ಪಕ್ಷದಲ್ಲು ನನ್ನ ಸ್ನೇಹಿತರಿದ್ದಾರೆ. ನಾವೆಲ್ಲ ಚರ್ಚೆಗಳನ್ನ ಮಾಡುತ್ತಲೇ ಇರ್ತೇವೆ.ಉಳಿದ ನಾಲ್ಕು ವರ್ಷ ಕುಮಾರಸ್ವಾಮಿ ಅವರೇ ಸಿಎಂ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷ ಕೋಮುವಾದಿ ಎಂದು ನಿಮ್ಮ ಪ್ರಶ್ನೆಯಲ್ಲೇ ಇದೆ. ದನ್ನ ನಾನು ಮತ್ತೊಮ್ಮೆ ಹೇಳಬೇಕಿಲ್ಲ ಎಂದು ಬಿಜೆಪಿಯನ್ನ ಪರೋಕ್ಷವಾಗಿ ಸಚಿವ ಜಿಟಿಡಿ ಕೋಮುವಾದಿ ಎಂದರು.

ಜೆಡಿಎಸ್ ಸೋಲಿಗೆ ಕಾರಣಗಳೇನು..? ಎಂಬ ಕಾರಣ ತಿಳಿಯಲು ತನಿಖಾ ಸಮಿತಿ ರಚಿಸಲು ಇಂದಿನ ಜೆಡಿಎಸ್ ಸಭೆಯಲ್ಲಿ ಸಮಿತಿ ರಚನೆಗೆ ಮನವಿ ಮಾಡುತ್ತೇವೆ. ಕೇವಲ ಮಂಡ್ಯ ತುಮಕೂರು ಕ್ಷೇತ್ರ ಮಾತ್ರವಲ್ಲ. ರಾಜ್ಯವ್ಯಾಪಿ ಜೆಡಿಎಸ್ ಸೋಲಿನ ಬಗ್ಗೆ ತನಿಖೆ ನಡೆಸಲು ಮನವಿ ಮಾಡ್ತೇವೆ ಎಂದು ಹೇಳಿದರು.

Key words: Minister GT Deve Gowda reacted to the preparation for the International Yoga Day.

#Mysore #GTDeveGowda #preparation #InternationalYogaDay.