ದೇಶದ ಪ್ರಥಮ ಮತ್ತು ಏಕೈಕ ಐಸಿಎಂಆರ್ ಅನುಮೋದಿತ ಮೊಬೈಲ್ ಕೋವಿಡ್ ಪರೀಕ್ಷಾ ಲ್ಯಾಬ್ ಗೆ ಸಚಿವ ಡಾ.ಕೆ.ಸುಧಾಕರ್ ಚಾಲನೆ

ಬೆಂಗಳೂರು, ಆ,5,2020(www.justkannada.in):   ಬೆಂಗಳೂರಿನ ಪ್ರತಿಷ್ಠಿತ ಐಐಎಸ್ ಸಿ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ ಮತ್ತು ಏಕೈಕ ಐಸಿಎಂಆರ್ ಅನುಮೋದಿತ ಮೊಬೈಲ್ ಆರ್ ಟಿ-ಪಿಸಿಆರ್ ಕೋವಿಡ್ ಪರೀಕ್ಷಾ ಲ್ಯಾಬ್ ಗೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಐಐಎಸ್ ಕ್ಯಾಂಪಸ್ ನಲ್ಲಿ ಚಾಲನೆ ನೀಡಿ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಹಸ್ತಾಂತರಿಸಿದರು.

ಇದು ಬಯೋ ಸುರಕ್ಷತೆ ಪ್ರಮಾಣೀಕರಣ ಹೊಂದಿರುವ ಅತ್ಯಂತ ಸುಸಜ್ಜಿತ ಮೊಬೈಲ್ ಕೋವಿಡ್ ಪರೀಕ್ಷಾ ಲ್ಯಾಬ್ ಆಗಿದ್ದು ಕೇವಲ 4 ಗಂಟೆಗಳಲ್ಲಿ ಟೆಸ್ಟ್ ವರದಿ ಪಡೆಯಬಹುದಾಗಿದೆ. ದಿನಕ್ಕೆ ಸುಮಾರು 400 ಟೆಸ್ಟ್ ನಡೆಸುವ ಸಾಮರ್ಥ್ಯ ಹೊಂದಿರುವ ಈ ಲ್ಯಾಬ್ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಟೆಸ್ಟ್ ನಡೆಸಲು ಬಳಸಬಹುದಾಗಿದೆ.minister-dr-k-sudhakar-launches-icmr-approved-mobile-covid-test-lab

ಐಐಎಸ್ ಸಿ ನಿರ್ದೇಶಕರು, ರಾಜೀವ್ ಗಾಂಧಿ ವಿವಿ ಉಪಕುಲಪತಿಗಳಾದ ಡಾ.ಸಚ್ಚಿದಾನಂದ ಅವರು ಉಪಸ್ಥಿತರಿದ್ದರು.

Key words: Minister -Dr K Sudhakar -launches – – ICMR -approved- mobile covid -test lab.