ನಾಳೆ ಮೈಸೂರು ವಿವಿಗೆ ಸಚಿವ ಡಾ.ಅಶ್ವಥ್ ನಾರಾಯಣ್ : ವಿವಿಧ ಯೋಜನೆಗಳಿಗೆ ಚಾಲನೆ.

kannada t-shirts

ಮೈಸೂರು,ಆಗಸ್ಟ್,19,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಕಟ್ಟಡ ಹಾಗೂ ಯೋಜನೆಗಳ ಉದ್ಘಾಟನಾ ‌ ಕಾರ್ಯಕ್ರಮ ನಾಳೆ (ಆ.20ರಂದು) ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಉದ್ಘಾಟನೆ ನೆರವೇರಿಸಲಿದ್ದಾರೆ.

ಮೊದಲಿಗೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರು ಕೇಂದ್ರ ಸರಕಾರದ ರೂಸಾ ಯೋಜನೆಯಡಿ ರೂಪಿಸಿರುವ ಕೆರೆಯರ್ ಹಬ್, ಸಂಶೋಧನಾ ವಿದ್ಯಾರ್ಥಿಗಳ ನೂತನ ವಸತಿ ನಿಲಯ ಹಾಗೂ ಗಣಕ ಅಧ್ಯಯನ ವಿಭಾಗದ ಎರಡನೇ ಮಹಡಿ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಲಿದ್ದಾರೆ.

ನಂತರ ಹಾಸನ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣಿಕ ಭವನ, ಕನ್ನಡ ಅಧ್ಯಯನ ಸಂಸ್ಥೆಯ ವಿಸ್ತರಿಸಿದ ಮೊದಲನೇ ಮಹಡಿ ಕಟ್ಟಡ, ಯುವರಾಜ ಕಾಲೇಜಿನ ರೂಸಾ 2.0 ಅನುದಾನದ ಅಡಿಯಲ್ಲಿ ನಿರ್ಮಿಸಲಾದ ನೂತನ ಕಟ್ಟಡ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನೂತನ ಘಟಕ ಕಾಲೇಜುಗಳ ಉದ್ಘಾಟನೆ (ಹೆತ್ತೂರು, ತೆರಕಣಾಂಬಿ, ಹಳ್ಳಿ ಮೈಸೂರು)ಯನ್ನು ಆನ್‌ಲೈನ್ ಮೂಲಕ ನಡೆಸಿಕೊಡಲಿದ್ದಾರೆ. ನಂತರ ಮಧ್ಯಾಹ್ನ 3.30ಕ್ಕೆ ಕ್ರಾಫರ್ಡ್ ಭವನದಲ್ಲಿ ನಡೆಯುವ ರಾಷ್ಟ್ರಿಯ ಶಿಕ್ಷಣ ನೀತಿ-2020 ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ ಹಾಗೂ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.

ENGLISH SUMMARY…

Minister Dr.Aswhathnarayana to visit UoM tomorrow: Inauguration of various programs
Mysuru, August 19, 2021 (www.justkannada.in): Higher Education Minister Dr. C.N. Ashwathnarayana will inaugurate various new buildings and programs at the University of Mysore tomorrow, i.e., on August 20, 2021.
First, the Minister will participate in the inaugural program of the Center of Excellence, constructed on the second floor of the Computer Research Section and the Research students’ new Hostel building, Career Hub formed under the RUSA program, of the Govt. of India.
After that, he will inaugurate the new ‘Shaikshanika Bhavana of the Hassan PG Center, first floor of the extended building of the Kannada Research Institute, a new building constructed under the RUSA 2.0 funds at Yuvaraja College. At 3.30 pm he will participate in the NEP-2020 launching program that will be held at the Crawford Hall. Sri Shivarathri Deshikendra Mahaswamiji, of the Suttur Math, will grace the occasion. MP Pratap Simha, MLA L. Nagendra and UoM VC Prof. G. Hemanth Kumar will be present.
Keywords: University of Mysore/ inauguration/ launch/ programs/ Dr. C.N. Ashwathnaryana

Key words: minister-Dr. Ashwath Narayan- Mysore university-tomorrow- inauguration- different projects.

website developers in mysore